ಜಿಲ್ಲೆ

ಮಹಾಮನೆಯಲ್ಲಿ 85 ಜನರಿಗೆ ಕಣ್ಣಿನ ತಪಾಸಣೆ

reportermys

ಚಾಮರಾಜನಗರ: ನಗರದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬೆಂಗಳೂರಿನ ಶ್ರದ್ಧಾ ಐ ಕೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 85 ಜನರು ಚಿಕಿತ್ಸೆ ಪಡೆದರು.


ನಗರದ ಮಹಾಮನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಕಣ್ಣಿನ ಪೊರೆಯುಳ್ಳ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ 19 ಜನರ ಪೈಕಿ 8 ಜನರನ್ನು ಬೆಂಗಳೂರಿನ ಶ್ರದ್ಧಾ ಐ ಕೇರ್ ಸೆಂಟರ್‌ಗೆ ಉಚಿತ ಬಸ್ಸಿನಲ್ಲಿ ಕಳುಹಿಸಿಕೊಡಲಾಯಿತು. 22 ಜನರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.


ಇದೇ ವೇಳೆ ವೀರಶೈವ ಲಿಂಗಾಯತ ನೌಕರರ ಸಂಘದ ಗೌರವ ಅಧ್ಯಕ್ಷ ಆರ್.ಎಂ.ಸ್ವಾಮಿ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗ ಕಣ್ಣು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು. ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿದರು. ಶ್ರದ್ಧಾ ಐ ಕೇರ್ ಸೆಂಟರ್ ತಜ್ಞ ವೈದ್ಯೆ ಡಾ.ಕೃಪಾಲಿ ಅವರು ಕಣ್ಣಿನ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಿವರ ನೀಡಿದರು. ಜಿ.ಪಂ. ಲೆಕ್ಕ ಅಧೀಕ್ಷಕ ಗಂಗಾಧರ್, ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಸಂಘದ ಉಪಾಧ್ಯಕ್ಷರಾದ ಎನ್.ಮಹದೆವಸ್ವಾಮಿ, ಎಂ.ಮಹೇಶ್, ಕಾರ್ಯದರ್ಶಿ ಅರ್ಕಪ್ಪ, ಖಜಾಂಚಿ ಎಸ್.ಮಹಾದೇವಸ್ವಾಮಿ ಉಪಸ್ಥಿತರಿದ್ದರು.