ಜಿಲ್ಲೆ

ಪ್ರಮಾಣಪತ್ರ ವಿತರಣೆಗೆ ಕ್ರಮ ವಹಿಸಿ

Chamarajanagar

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದಿಂದ ತಹಸೀಲ್ದಾರ್‌ಗೆ ಮನವಿ

ಗುಂಡ್ಲುಪೇಟೆ: ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಘಟಕ ವತಿಯಿಂದ ತಹಸೀಲ್ದಾರ್ ನಂಜುಂಡಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ತಳವಾರ ಹಾಗೂ ಪರಿವಾರ ಪರ್ಯಾಯ ಪದಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆದ್ದರಿಂದ ಶಾಲಾ-ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮಹಾಸಭಾದ ತಾಲೂಕು ಗೌರವಾಧ್ಯಕ್ಷ ನಾಗೇಂದ್ರ, ಅಧ್ಯಕ್ಷ ರಮೇಶನಾಯ್ಕ, ಪದಾಧಿಕಾರಿಗಳಾದ ಬಾಲು, ಪ್ರದೀಪ್, ರಂಗಸ್ವಾಮಿನಾಯಕ, ನಾಗರಾಜು, ಶ್ರೀನಿವಾಸ, ಪ್ರದೀಪ್, ಪಾಪಣ್ಣ ಇತರರು ಇದ್ದರು.