ಜಿಲ್ಲೆ

ಸೋಂಕಿಗೆ ಬಲಿಯಾಗಿದ್ದ ಪತಿಯ ಅಂತ್ಯಸಂಸ್ಕಾರ ನಡೆಸಿ ಬರುವಷ್ಟರಲ್ಲಿ ಪತ್ನಿಯೂ ಕೊನೆಯುಸಿರು!

Mandara

ಚಾಮರಾಜನಗರ: ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದ ಪತಿಯ ಅಂತ್ಯಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಪತ್ನಿಯೂ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ನಾಗರತ್ನಮ್ಮ ಬಡಾವಣೆಯ ನಿವಾಸಿ ಸುದರ್ಶನ್(51) ಚುರುಮುರಿ ವ್ಯಾಪಾರಿಯಾಗಿದ್ದು, ಅವರು ಮತ್ತು ಅವರ ಪತ್ನಿ ಹೇಮಲತಾ (45)ಗೆ ಇತ್ತೀಚೆಗೆ ಕರೊನಾ ಸೋಂಕು ದೃಢವಾಗಿತ್ತು. ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಪತಿ ಸುದರ್ಶನ್ ಸಾವನ್ನಪ್ಪಿದ್ದಾನೆ. ಪತಿ ಸುದರ್ಶನ್ ಅಂತ್ಯಕ್ರಿಯೆ ಮುಗಿಯುವಷ್ಟರಲ್ಲಿ ಪತ್ನಿ ಹೇಮಲತಾ ಕೂಡ ಕೊನೆಯುಸಿರೆಳೆದಿದ್ದಾಳೆ.