ಚಾಮರಾಜನಗರ: ತಾಲೂಕಿನ ಮರಿಯಾಲದಹುಂಡಿ ಗ್ರಾಮದ ನಿವಾಸಿ ಮಂಜುಳಾ(45) ಕಾಣೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.
ಮಂಜುಳ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಎಡಗೈನಲ್ಲಿ ಮಹೇಶ್ ಎಂದು ಹಸಿರು ಅಚ್ಚೆ ಗುರುತು ಇರುತ್ತದೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕ್ಷಕರ ದೂ.ಸಂ. 08226-222243 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.