ಜಿಲ್ಲೆ

ರೈತ, ಬಡವರ ಪರ ನಿಲ್ಲುವ ಸರ್ಕಾರ ಬರಲಿ

ಚಾಮರಾಜನಗರ: ಮುಂದಿನ ಬಾರಿ ಡಾ.ಬಿ.ಆರ್. ಅಂಬೇಡ್ಕರ್ ಆಶಯ ಈಡೇರಿಸುವ ಸರ್ಕಾರ ಬರಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜು ಒಡೆಯರ್ ಹೇಳಿದರು.


ತಾಲೂಕಿನ ಚಂದಕವಾಡಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಾತ್ಯತೀತ ಜನತಾದಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 66ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಲಿತ ಪರ, ರೈತರ ಪರ, ಬಡವರ ಪರ, ನಿಲ್ಲುವ ಸರ್ಕಾರ 2023ಕ್ಕೆ ತರಬೇಕು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಏಕೈಕ ಪ್ರಧಾನಿಯಾಗಿ, ಎಚ್.ಡಿ. ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯ, ದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

ರಾಜ್ಯ ಕಾರ್ಯದರ್ಶಿ ಎಚ್.ಕೆ. ರಾಮು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಇಡೀ ವಿಶ್ವಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿ ಅ ಮೂಲಕ ಎಲ್ಲರಿಗೂ ಸಮಪಾಲು, ಸಮಬಾಳು ಕೊಟ್ಟಿದ್ದಾರೆ ಎಂದರು.
ತಾಲೂಕು ಅಧ್ಯಕ್ಷ ಸೈಯದ್ ಅಕ್ರಂ, ಮುಖಂಡರಾದ ಶಿವಮಲ್ಲು, ಸೈಯದ್ ಇದ್ರೀಸ್, ಮೂಯಿಬ್ ಷರೀಫ್, ಹಬೀಬ್, ಫಾಯಾಜ್, ಪುರ್ಖಾನ್, ಹರದನಹಳ್ಳಿ ರಾಮಚಂದ್ರ, ಶಿವಮಲ್ಲು, ಪ್ರಾಂಶುಪಾಲ ಸ್ವಾಮಿ, ಅಭಿನಂದನ್ ಇದ್ದರು.