ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 25 ವ್ಯಾಪ್ತಿಯ ತಿಲಕ್‌ನಗರದ ಪುಲಕೇಶಿ ರಸ್ತೆಯ ತೆಲಗುರೆಡ್ಡಿ ಶ್ರೀರಾಮ ಮಂದಿರದ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು. ರಂಗಸ್ವಾಮಿ, ದಾಸಪ್ರಕಾಶ್, ವಿನಯ್, ಗುರುಪ್ರಸಾದ್, ಹರೀಶ್, ಕಾಂತ, ಚಂದ್ರಶೇಖರ್, ಪ್ರಕಾಶ್, ಸುರೇಂದ್ರ, ಸ್ವಾಮಿ, ರಮೇಶ್, ಮಹೇಶ್, ರಾಜ ಇತರರಿದ್ದರು. 
ಜಿಲ್ಲೆ

ಶಾಸಕ ಎಲ್.ನಾಗೇಂದ್ರ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Mysuru

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿರುವ ಶಾಸಕ ಎಲ್.ನಾಗೇಂದ್ರ ಕ್ಷೇತ್ರದಲ್ಲಿ ನಿರಂತರವಾಗಿ ನಾನಾ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಸುತ್ತಿದ್ದು, ಬುಧವಾರವೂ ಕ್ಷೇತ್ರದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.


ರಸ್ತೆಗಳ ಅಭಿವೃದ್ಧಿ ಹಾಗೂ ಯುಜಿಡಿ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿರುವ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ 5 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ ಸಂಖ್ಯೆ 25 ರ ವ್ಯಾಪ್ತಿಯ ತಿಲಕ್‌ನಗರದ ಪುಲಕೇಶಿ ರಸ್ತೆಯ ತೆಲಗುರೆಡ್ಡಿ ಶ್ರೀರಾಮ ಮಂದಿರದ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಪಾಲಿಕೆ ಸದಸ್ಯ ರಂಗಸ್ವಾಮಿ, ಮಾಜಿ ಸದಸ್ಯ ದಾಸಪ್ರಕಾಶ್, ವಿನಯ್, ತೆಲಗುರೆಡ್ಡಿ ಸಮಾಜದ ಮುಖಂಡರಾದ ಗುರುಪ್ರಸಾದ್, ಹರೀಶ್, ಕಾಂತ, ಚಂದ್ರಶೇಖರ್, ಪ್ರಕಾಶ್, ಸುರೇಂದ್ರ, ಬಿಜೆಪಿ ಮುಖಂಡರಾದ ಸ್ವಾಮಿ, ರಮೇಶ್, ಮಹೇಶ್, ರಾಜ ಇತರರಿದ್ದರು.