ಮೈಸೂರು: ‘ಚಾಮಯ್ಯ ಮೇಸ್ಟ್ರು’ ಎಂದೇ ಜನ ಮಾನಸದಲ್ಲಿರುವ ಹಿರಿಯ ಚಿತ್ರನಟ ಕೆ.ಎಸ್.ಅಶ್ವತ್ಥ್ ಅವರ ಜನ್ಮ ಶತಾಬ್ದಿ ಅಂಗವಾಗಿ ಅವರ ಅಭಿನಯದ ಚಿತ್ರಗೀತೆಗಳ ಮೂಲಕ ನೆನಪು ಮಾಡಿಕೊಳ್ಳಲಾಯಿತು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದಿಂದ ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಮಂಗಳವಾರ ‘ಚಾಮಯ್ಯ ಮೇಷ್ಟ್ರು- ಕೆ.ಎಸ್.ಅಶ್ವತ್ಥ್ ಜನ್ಮ ಶತಾಬ್ದಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ಅವರ ನೆನಪಿನಂಗಳದೊಂದಿಗೆ ನಿರೂಪಣೆ ಮೂಲಕ 33 ಹಾಡುಗಳ ಗಾಯಕರು ಹಾಡುವ ಮೂಲಕ ಚಾಮಯ್ಯ ಮೇಸ್ಟ್ರಿಗೆ ಗೀತ ನಮನ ಸಲ್ಲಿಸಿದರು.
ಶಂಕರ್ ಅಶ್ವತ್ಥ್ ಅವರ ವಿನೂತನ ನಿರೂಪಣೆಯೊಂದಿಗೆ ಕೆ.ಎಸ್.ಅಶ್ವತ್ಥ್ ಅವರ ಹಳೆಯ ಫೋಟೋ ಮತ್ತು ವಿಡಿಯೋಗಳ ತುಣಕುಗಳು ಪರದೆಯಲ್ಲಿ ಪ್ರದರ್ಶನಗೊಂಡವು. ಶಂಕರ್ ಅಶ್ವತ್ಥ್ ಅವರು ತಮ್ಮ ತಂದೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ ದಿನಗಳಿಂದ ಜೀವಿತದ ಕೊನೆಯವರೆಗೆ ನಡೆದ ಘಟನೆಗಳನ್ನು ಸಭಿಕರ ಮುಂದೆ ಮೆಲುಕು ಹಾಕಿದರು.
ಅವರ ಜೀವನ, ಹುಟ್ಟು, ಸೋದರತ್ತೆ ಸಾಕಿ ಬೆಳೆಸಿದ್ದು, ಜೀವನದಲ್ಲಿ ನಡೆದುಕೊಂಡ ರೀತಿ, ಟಾಂಗಾ, ಬಸ್ಸು, ರೈಲಿನಲ್ಲಿಯೇ ಓಡಾಡುತ್ತಿದ್ದು ಸೇರಿದಂತೆ ಹಲವು ಸ್ವಾರಸ್ಯಕರ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ಚಾಮಯ್ಯ ಮೇಷ್ಟ್ರೆ ನಿಮಗೆ, ನಿನ್ನೊಲುಮೆ ನನಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ... ಸೇರಿದಂತೆ ಎಲ್ಲ ಹಾಡುಗಳು ಕೇಳುಗರ ಕಿವಿಗೆ ಇಂಪೆರೆದವು.
ಯಾರಿಗೆ ಯಾರುಂಟು, ಬಾಳೊಂದು ನಂದನ, ಕೋಯಿ ಹೋತಾ, ಬಾರೆ ಬಾರೆ, ಜಯತೆ ಜಯತೆ, ನನ್ನವಳು ನನ್ನೆದೆಯ, ಅಣ್ಣಾ ನಿನ್ನ ಸೋದರಿಯಣ್ಣ, ಕಲ್ಲು ಕವಿತೆಯ ಹಾಡುವುದು, ಹಳ್ಳಿಯಾದರೇನು ಶಿವ, ನನ್ನ ಪುಟ್ಟ ಸಂಸಾರ, ಇಂದು ಎನಗೆ ಗೋವಿಂದಾ, ಭಾರತ ಭೂಶಿರ, ಸ್ನೇಹದ ಕಡಲಲ್ಲಿ, ಆ ಕರ್ಣನಂತೆ, ನಗಿಸಲು ನೀನು, ಬಾನಲ್ಲೂ ನೀನೆ, ತೆರೆದಿದೆ ಮನ, ಬಾನ ದಾರಿಯಲ್ಲಿ, ಆಡಿಸಿ ನೋಡು, ನೀನೆಲ್ಲಿ ನಡೆವ ದೂರ, ತೂಗುವೆ ರಂಗನ, ಮಂಗಳದ ಈ ಸುದಿನ, ಓಹೋ ಪ್ರೇಮ ಕಾಶ್ಮೀರ, ಆಡಿಸಿದಾತ ಬೇಸರ ಮೂಡಿ, ನಲಿಯುತಾ ಹೃದಯವು ಹಾಡಿತು, ಕಂಡು ಕಂಡು ನೀ ಎನ್ನ, ತುತ್ತು ಅನ್ನ ತಿನ್ನೋಕೆ, ನಿನ್ನ ಕಣ್ಗಂಗಳ ಬಿಸಿಯ ಹನಿಗಳು, ತುಜೆ ಸೂರಜ್ ಕಹು, ನೀಲು ಮೇಘ ಶ್ಯಾಮ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಗಾಯಕರಾದ ಎ.ಡಿ. ಶ್ರೀನಿವಾಸ್, ಕೃಷ್ಣಮೂರ್ತಿ, ಇಂದ್ರಾಣಿ ಅನಂತರಾಮ್, ರಶ್ಮಿ ಚಿಕ್ಕಮಗಳೂರು, ಶಾಹಿದ್, ಜಯರಾಮ್, ಡೇವಿಡ್, ಎನ್. ಬೆಟ್ಟೇಗೌಡ, ಡಾ.ವೈ.ಡಿ. ರಾಜಣ್ಣ, ಶ್ರೀಕಾಂತರಾವ್, ಶ್ರೀಧರ್, ರವಿರಾಜ್ ಹಾಸು, ಡಾ. ಪೂರ್ಣಿಮಾ, ಶ್ರೀಲತಾ, ಸಿ.ಎಸ್. ವಾಣಿ, ವೇದಶ್ರೀ, ಗೀತಲಕ್ಷ್ಮೀ ಕಿಣಿ, ಅಬ್ದುಲ್ ಖಯ್ಯುಮ್, ನಾಗೇಂದ್ರ, ರಮೇಶ್, ಅಮೃತೇಶ್, ಶ್ರೀಕಂಠರಾವ್, ಕೃಷ್ಣಮೂರ್ತಿ, ಶ್ರೀಧರ್, ಎಚ್.ವಿ. ನಾಗೇಂದ್ರ ಇತರರು ಗಾಯನ ಪ್ರಸ್ತುತಪಡಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗ ಕಲಾವಿದ ರಾಜಶೇಖರ ಕದಂಬ, ಹಿರಿಯ ಸಹಕಾರಿ ಕೆ.ರಘುರಾಮ್ ವಾಜಪೇಯಿ, ಮಂಡ್ಯ ಸತ್ಯ, ಅಲಯನ್ಸ್ ಸಹಾಯಕ ರಾಜ್ಯಪಾಲ ಸಂತೋಷ್‌ಕುಮಾರ್, ರಂಗನಾಥ್ ಮೈಸೂರು, ವಿಜಯವಿಠಲ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಇತರರು ಭಾಗವಹಿಸಿದ್ದರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೆರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ೆ.ಡಿ. ರಾಜಣ್ಣ, ಆಯೋಜಕರಾದ ಎನ್. ಬೆಟ್ಟೇಗೌಡ, ಸುಧಾ ಶಂಕರ್ ಅಶ್ವತ್ಥ್ ಇತರರು ಇದ್ದರು.