ಹುಲಬಾಳ ಗ್ರಾಮದ ದುರ್ಗಿ ತೋಟದಲ್ಲಿ ನೆರೆ ಸಂತ್ರಸ್ತರೊಂದಿಗೆ ಶಾಸಕ ಲಕ್ಷ್ಮಣ ಸವದಿ ಚರ್ಚಿಸಿದರು. ಪರಶುರಾಮ ಕೋಳಿ, ಲಕ್ಷ್ಮಣ ದುರ್ಗಿ, ಕಾಶಿಬಾಯಿ ಚೌಗಲಾ ಇತರರಿದ್ದರು. 
ಜಿಲ್ಲೆ

ಸವಾಲು ಎದುರಿಸಲು ಅಗತ್ಯ ಸಿದ್ಧತೆ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತ ಆಹಾರ, ನೀರು, ಆರೋಗ್ಯ, ಆಶ್ರಯ ಸೌಲಭ್ಯ ನೀಡುತ್ತಿದ್ದು, ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಂಡಿದೆ. ಸಂತ್ರಸ್ತರು ಹೆದರುವ ಅವಶ್ಯಕತೆ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಪ್ರವಾಹ ಬಾಧಿತ ಹುಲಬಾಳ, ಹುಲಬಾಳ ದುರ್ಗಿ ತೋಟ, ಅವರಖೋಡ, ಖವಟಕೊಪ್ಪ, ಶೇಗುಣಸಿ ಸೇರಿ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿ, ದನಕರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಶುರಾಮ ಕೋಳಿ, ಲಕ್ಷ್ಮಣ ದುರ್ಗಿ, ಕಾಶಿಬಾಯಿ ಚೌಗಲಾ, ಸುಮಿತ್ರಾ ಕೋಳಿ, ಮುನ್ನಾ ಪಕಾಲಿ, ಜ್ಯೋತಿಬಾ ಬೇಡಗ, ವಿಜಯ ಸಾವಂತ, ಮಮತಾಜ ಪಕಾಲಿ ಇತರರಿದ್ದರು.