ಜಿಲ್ಲೆ

ಗಾದ್ರಿ ಪಾಲನಾಯಕ ಸ್ವಾಮಿ ಗುಗ್ಗರಿ ಹಬ್ಬ

ಚಳ್ಳಕೆರೆ: ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಮಂಗಳವಾರ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿ ಗುಗ್ಗರಿ ಹಬ್ಬವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ದೇವರ ಗುಡಿಕಟ್ಟಿಗೆ ಸೇರಿರುವ ಜಾಜೂರು, ನಾಗಗೊಂಡನಹಳ್ಳಿ, ಕಾಲುವೇಹಳ್ಳಿ, ಜೆ.ಎನ್. ಕೋಟೆ, ಹಾಲಿಗೊಂಡನಹಳ್ಳಿ, ಚೌಳೂರು, ದೊಣೆಹಳ್ಳಿ ಅಣ್ಣ-ತಮ್ಮಂದಿರಿಂದ ಸಂಗ್ರಹಿಸಿದ ಗುಗ್ಗರಿಯನ್ನು ಮಣೆ ಹಾಕಿ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಗ್ರಾಪಂ ಸದಸ್ಯ ಕೃಷ್ಣಪ್ಪ, ಗುಡಿಕಟ್ಟಿನ ಯಜಮಾನ ರಾಮಣ್ಣ, ಪೂಜಾರಿ ಹನುಮಂತಪ್ಪ, ಮೇಟಿಗಳಾದ ಓಬಣ್ಣ, ಕಟ್ಟೇರಪ್ಪ, ಓಬಳೇಶಪ್ಪ, ಮಾರಜ್ಜ, ಪಾಲಯ್ಯ, ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಯಾದಲಗಟ್ಟೆ ಜಗನ್ನಾಥ, ಮುತ್ತುರಾಜ್ ಮತ್ತಿತರರಿದ್ದರು.