ಜಿಲ್ಲೆ

ನೀರಿನ ಸಮಸ್ಯೆಗೆ ಪರಿಹಾರ

ಚಳ್ಳಕೆರೆ; ತಾಲೂಕಿನ ಕೊರ‌್ಲಕುಂಟೆ ಗ್ರಾಮದ ಹೊರವಲಯದಲ್ಲಿ ಗುರುವಾರ ಪಿಆರ್‌ಡಿ ಯೋಜನೆಯಡಿ ಬೋರ್‌ವೆಲ್ ಕೊರೆಯಿಸಿದ್ದು, ಉತ್ತಮ ನೀರು ಲಭ್ಯವಾಗಿದೆ.

ಇಲ್ಲಿ ವಾಸವಾಗಿರುವ ನಿವಾಸಿಗಳಿಗೆ ಆರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಶಾಸಕ ಟಿ.ರಘುಮೂರ್ತಿ ಅವರ ಸಹಕಾರದಿಂದ ಕೊಳವೆಬಾವಿ ಕೊರೆಸಲಾಗಿದೆ ಎಂದು ಗ್ರಾಪಂ ಸದಸ್ಯ ಜೆ.ತಿಪ್ಪೇಸ್ವಾಮಿ ತಿಳಿಸಿದರು.

ಪಂಚಾಯಿತಿ ವತಿಯಿಂದ ಟ್ಯಾಂಕರ್ ಮತ್ತು ಬೇರೆ ಕಡೆಯಿಂದ ಪೈಪ್‌ಲೈನ್ ವ್ಯವಸ್ಥೆ ಮಾಡಿಸಿದ್ದರೂ ನೀರಿನ ಸಮಸ್ಯೆ ನೀಗಿರಲಿಲ್ಲ. ಜನ ನೀರು ತರಲು ದೂರದ ಜಮೀನುಗಳಿಗೆ ಹೋಗುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಸ್ತುತ ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ತಿಪ್ಪೇಸ್ವಾಮಿ ಇತರರು ಇದ್ದರು.