ಜಿಲ್ಲೆ

ವೈಜ್ಞಾನಿಕ ಚಿಂತನೆ ಮಕ್ಕಳಲ್ಲಿ ಬಿತ್ತಿ

Chitradurga

ಚಳ್ಳಕೆರೆ: ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸರ್ವ ಕ್ಷೇತ್ರದಲ್ಲೂ ವಿಜ್ಞಾನದ ಅಗತ್ಯವಿದೆ. ಈ ಬಗ್ಗೆ ಮಕ್ಕಳಿಗೆ ಬಾಲದ್ಯದಿಂದಲೇ ಆಸಕ್ತಿ ಬೆಳೆಸಬೇಕು. ಅನುಪಯುಕ್ತ ವಸ್ತುಗಳ ಮರುಬಳಕೆ ಇತ್ಯಾದಿ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಲು ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

ಬಿಇಒ ಸಿ.ಎಸ್.ವೆಂಕಟೇಶ್, ಅಕ್ಷರ ದಾಸೋಹ ನಿರ್ದೇಶಕ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿ ನಾಗಭೂಷಣ್, ಇಸಿಒ ಗಿರೀಶ್‌ಬಾಬು, ಪಿಡಿಒ ರಾಮಚಂದ್ರಪ್ಪ, ಮುಖ್ಯಶಿಕ್ಷಕ ವೆಂಕಟೇಶ್ ರೆಡ್ಡಿ, ಶಾಲಾ ಸಮಿತಿ ಅಧ್ಯಕ್ಷ ಭೂತರಾಜು ಇತರರಿದ್ದರು.