ಚಳ್ಳಕೆರೆ: ತಾಲೂಕಿನ ಕೊರ‌್ಲಕುಂಟೆ ಗ್ರಾಮದ ಹನುಮಂತರಾಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಮೇಲ್ದೀಪ ಹಚ್ಚುವ ಮೂಲಕ ರಾಮನವಮಿಯನ್ನು ಸರಳವಾಗಿ ಆಚರಿಸಲಾಯಿತು.
ಗ್ರಾಪಂ ಸದಸ್ಯರಾದ ಪುಟ್ಟಮ್ಮ, ಬಾಲನಾಗಮ್ಮ, ವೆಂಕಟೇಶಪ್ಪ, ಮುಖಂಡರಾದ ಕೆ.ಜಿ.ಸಿದ್ದಣ್ಣ, ಪಿ.ಕೆಂಗಪ್ಪ, ಶಿವರಾಮ ಶೆಟ್ಟಿ, ಎಂ.ವೀರಣ್ಣ, ಕೆ.ವಿ.ಪ್ರಸನ್ನ, ಕೆ.ಆರ್.ರಾಜಶೇಖರ, ಮಹಾಲಿಂಗಪ್ಪ, ಮಲ್ಲೇಶಿ, ಪೂಜಾರಿ ನಾಗಣ್ಣ ಮತ್ತಿತರರಿದ್ದರು.