ಜಿಲ್ಲೆ

ತಾಲೂಕು ಆಡಳಿತ ನೇರ ವಿತರಿಸಬೇಕು

Chitradurga

ಚಳ್ಳಕೆರೆ: ತಾಲೂಕು ಆಡಳಿತ ಪರಿಹಾರ ನಿಧಿ ಸ್ಥಾಪಿಸಿ, ದಾನಿಗಳಿಂದ ಹಣ, ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಿಕೊಂಡು ಇಲಾಖೆ ಸಿಬ್ಬಂದಿ ಮುಖಾಂತರ ಬಡವರಿಗೆ ಹಂಚುವ ವ್ಯವಸ್ಥೆ ಕಲ್ಪಿಸಬೇಕು ಎಂದು ನವಜಾಗೃತಿ ಸಂಘಟನೆ ಜಿಲ್ಲಾ ಸಂಚಾಲಕ ಯಾದಲಗಟ್ಟೆ ಜಗನ್ನಾಥ್ ಅಗ್ರಹಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕರೊನಾ ವಿರುದ್ಧ ಹೋರಾಡಲು ಇರುವ ಏಕೈಕ ಮಾರ್ಗ. ಆದರೆ, ರಾಜಕೀಯ ಮುಖಂಡರು ಆಹಾರ ಹಂಚುವ ನೆಪದಲ್ಲಿ ಈ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಪಕ್ಷಗಳ ಶಕ್ತಿ ಪ್ರದರ್ಶನ ಎಲ್ಲೆಡೆ ಕಾಣುತ್ತಿದ್ದೇವೆ.

ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಇಂತಹ ಚಟುವಟಿಕೆಗೆ ಸರ್ಕಾರ ಕಡಿವಾಣ ಹಾಕಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ವ್ಯವಸ್ಥೆಯ ಜತೆಗೆ ಸಾರ್ವಜನಿಕ ದಾನಿಗಳಿಂದಲೂ ನೆರವು ಪಡೆದುಕೊಂಡು ಅರ್ಹ ಕುಟುಂಬಗಳಿಗೆ ಸಮಾನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.