ಜಿಲ್ಲೆ

ತುಂಗಭದ್ರಾ ಹಿನ್ನೀರು ಯೋಜನೆ

Chitradurga

ಚಳ್ಳಕೆರೆ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ತುಂಗಭದ್ರಾ ಹಿನ್ನೀರು ಯೋಜನೆಯ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ಹೊಟ್ಟೆಪ್ಪನಹಟ್ಟಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಗುರುವಾರ ಧಾರ್ಮಿ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ, ಇದರಿಂದ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರು ಲಭಿಸಲಿದೆ. ತಾಲೂಕಿನ ವೇದಾವತಿ ನದಿಗೂ ವಿವಿ ಸಾಗರದಿಂದ ನೀರು ಹರಿಸಲು ಜಿಲ್ಲಾಧಿಕಾರಿ, ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದು ತಿಳಿಸಿದರು.