ಜಿಲ್ಲೆ

20ಕ್ಕೆ ರಾಮಜೋಗಿಹಳ್ಳಿಯಲ್ಲಿ ಜಾತ್ರೆ

Chitradurga

ಚಳ್ಳಕೆರೆ: ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಜ.20ರಿಂದ ಐದು ದಿನಗಳ ಕಾಲ ದುರ್ಗಾಂಭಿಕಾ ಮತ್ತು ಪೊಲೇರಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ.

ಗಾಳಿ ಮಾರಮ್ಮ ದೇವಿಯ ಪೂಜಾ ಕಾರ್ಯಕ್ರಮದಿಂದ ಆರಂಭವಾಗುವ ಜಾತ್ರಾ ಮಹೋತ್ಸವದಲ್ಲಿ ದೇವಿಯ ಧ್ವಜಾರೋಹಣ ಮತ್ತು ಕಂಕಣಧಾರಣೆ ಬಳಿಕ ನನ್ನಿವಾಳದ ಹಳ್ಳಕ್ಕೆ ದೇವಿಯನ್ನು ಗಂಗಾಪೂಜೆಗೆ ಕರೆದೊಯ್ಯುಲಾಗುತ್ತದೆ.

ಬಲಿ ಅನ್ನ ಸಮರ್ಪಣೆ, ದೇವಿಗೆ ನೈವೇದ್ಯ ಮತ್ತು ಬೇವಿನ ಸೀರೆ ಹರಕೆ, ಪೋತರಾಜರಿಂದ ಗಾವು ಸಿಗಿಯುವಿಕೆ, ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಕಲಾವಿದರಿಂದ ಭರತನಾಟ್ಯ, ಶ್ರೀಕೃಷ್ಣ ಕಲಾತಂಡದವರಿಂದ ತಾಯಿ ಇಲ್ಲದ ತಬ್ಬಲಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಜಾತ್ರಾ ಮಹೋತ್ಸವದಲ್ಲಿ ಶ್ರೀ ರಾಜರಾಮ್ ಸ್ವಾಮೀಜಿ, ಶಾಸಕ ಟಿ.ರಘುಮೂರ್ತಿ, ಸಂಸದ ಎ.ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.