ಜಿಲ್ಲೆ

ಹತೋಟಿಗೆ ಮುಂಜಾಗ್ರತಾ ಕ್ರಮ ಅಗತ್ಯ

Chitradurga

ಚಳ್ಳಕೆರೆ: ರಾಜಸ್ಥಾನ, ಮಹಾರಾಷ್ಟ್ರ ಮಾರ್ಗವಾಗಿ ರಾಜ್ಯಕ್ಕೆ ಮಿಡತೆಗಳು ಧಾವಿಸುವ ಸಾಧ್ಯತೆ ಇರುವ ಕಾರಣಕ್ಕೆ ಇವುಗಳ ಹತೋಟಿಗೆ ಸರ್ಕಾರ ಕೂಡಲೇ ಮುಂಜಾಗ್ರತ ಕ್ರಮಕೈಗೊಳ್ಳಬೇಕು ಎಂದು ದಸಂಸ (ಎಂಎಸ್ ಬಣ) ರಾಜ್ಯ ಸಮಿತಿ ಸದಸ್ಯ ನಗರಂಗೆರೆ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಮಿಡತೆಗಳ ನಿಯಂತ್ರಣ ಮಾಡದಿದ್ದಲ್ಲಿ ರಾಜ್ಯದ ಪರಿಸರ ಮತ್ತು ರೈತರ ಬೆಳೆ ಸಂಪೂರ್ಣ ಹಾಳಾಗುತ್ತದೆ. ಇದರಿಂದ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಎದುರಾಗಲಿದೆ. ಈಗಾಗಲೇ ರಾಜ್ಯದ ರಾಯಚೂರು ಜಿಲ್ಲೆಗಳ ಭಾಗದಲ್ಲಿ ಕಾಣಿಸಿಕೊಂಡಿರುವ ಮಿಡತೆ ಹಾವಳಿಗೆ ರೈತರು ಆತಂಕಕ್ಕೀಡಾಗಿದ್ದಾರೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಮಿಡತೆಗಳ ಹಾವಳಿ ನಿಯಂತ್ರಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.