ಜಿಲ್ಲೆ

ಆನ್‌ಲೈನ್‌ಗೆ ಋಣಭಾರ ಪ್ರಮಾಣಪತ್ರ

Chitradurga

ಚಳ್ಳಕೆರೆ: ಮುದ್ರಾಂಕ ಇಲಾಖೆಯಿಂದ ನೀಡುತ್ತಿದ್ದ ಋಣಭಾರ ಪ್ರಮಾಣ ಪತ್ರ ವನ್ನು ಆನ್‌ಲೈನ್‌ಗೆ ಬದಲಾಯಿಸಿರುವ ಆದೇಶ ಹಿಂಪಡೆಯಲು ಆಗ್ರಹಿಸಿ ಪತ್ರಿಕಾ ಸಂಪಾದಕರ ಸಂಘದ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸರ್ಕಾರದ ಹೊಸ ನಿಯಮದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತದೆ. ಹಿಂದೆ ಸರಳ ಮಾದರಿಯಲ್ಲಿ ಜನ ಇಸಿ ಪ್ರಮಾಣ ಪತ್ರ ಪಡೆಯುವ ಸೌಲಭ್ಯವಿತ್ತು. ಈಗ ವಾರಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಪಿ.ಗಂಗಾಧರ, ಪ್ರಧಾನ ಕಾರ್ಯದರ್ಶಿ ಡಿ.ಉಮೇಶ್‌ಚಂದ್ರ ಬ್ಯಾನರ್ಜಿ, ಡಿ.ತಿಪ್ಪೇಸ್ವಾಮಿ, ಹೊನ್ನೂರು ಮಾರಣ್ಣ, ಡಿ.ನಿಂಗಪ್ಪ ಕೆ.ಟಿ.ರಾಜಣ್ಣ, ಟಿ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.