ಜಿಲ್ಲೆ

ಉನ್ನತ ಶಿಕ್ಷಣಕ್ಕೆ ಎಸ್ಸೆಸ್ಸೆಲ್ಸಿ ದಿಕ್ಸೂಚಿ

Chitradurga

ಚಳ್ಳಕೆರೆ: ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿಯು ಉನ್ನತ ಶಿಕ್ಷಣಕ್ಕೆ ದಿಕ್ಸೂಚಿ ಇದ್ದಂತೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಶಿಕ್ಷಣ ಇಲಾಖೆ, ನಂದೀಶ್ವರ ನೈಪುಣ್ಯ ಕೌಶಲ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇಲ್ಲಿನ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಕ್ರಿಯಾಶೀಲತೆಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಒಂದು ಸಿನಿಮಾವನ್ನು ಆಸಕ್ತಿಯಿಂದ ನೋಡುವುದರಿಂದ ಅದರ ಕಥಾವಸ್ತುವನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳುತ್ತೇವೆ. ಅದೇ ರೀತಿ ಪಾಠ, ಪ್ರವಚನಗಳನ್ನು ಆಸಕ್ತಿಯಿಂದ ಕಲಿಯಬೇಕು ಎಂದರು.

20 ವರ್ಷಗಳ ಹಿಂದೆ ಕೇವಲ ತೇರ್ಗಡೆ ಆಗುವುದೇ ದೊಡ್ಡ ಮಾತಾಗಿತ್ತು. ಪ್ರಸ್ತುತ ಸ್ಪರ್ಧಾ ಸಮಾಜದಲ್ಲಿ ಪರಿಪೂರ್ಣತೆ ಇದ್ದರೆ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ತಾಲೂಕು ಕೇಂದ್ರದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಾಕಷ್ಟು ಶೈಕ್ಷಣಿಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಶಿಕ್ಷಣ ಪ್ರಗತಿಗಾಗಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಶ್ರಮ ಇರಬೇಕು. ಶಿಕ್ಷಣದಲ್ಲಿ ಸಾಧನೆ ಮಾಡುವ ಮೂಲಕ ಹುಟ್ಟೂರು ಮತ್ತು ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವ ಚಿಂತನೆ ವಿದ್ಯಾರ್ಥಿಗಳಲ್ಲಿ ಇರಬೇಕು. ಕುಟುಂಬದ ಸಮಸ್ಯೆಗಳು ಮತ್ತು ಸೌಕರ್ಯಗಳ ಕೊರತೆ ನೆಪದಿಂದ ಕಲಿಕೆಯಿಂದ ದೂರ ಆಗಬಾರದು ಎಂದು ಹೇಳಿದರು.

ಡಿಡಿಪಿಐ ಶಿವಶಂಕರರೆಡ್ಡಿ, ನಗರಸಭೆ ಸದಸ್ಯರಾದ ಆರ್.ಮಂಜುಳಾ, ವಿರೂಪಾಕ್ಷಪ್ಪ, ತಾಪಂ ಸದಸ್ಯರಾದ ಎಚ್.ಆಂಜನೇಯ, ಜಿ.ವೀರೇಶ್, ಮುಖಂಡರಾದ ಆರ್.ಪ್ರಸನ್ನಕುಮಾರ್, ಗಾಂಧಿನಗರ ಕೃಷ್ಣ, ಖಾದರ್ ಮತ್ತಿತರರು ಇದ್ದರು.