ಚಳ್ಳಕೆರೆ: ರಾಷ್ಟ್ರೀಯ ಬಸವದಳ ಟ್ರಸ್ಟ್ ಕಾರ್ಯಕರ್ತರು ಬುಧವಾರ ಶಾಸಕ ಟಿ.ರಘುಮೂರ್ತಿ ಅವರನ್ನು ಭೇಟಿಯಾಗಿ ಬಸವೇಶ್ವರ ನಗರದಲ್ಲಿ ಬಸವ ಮಂಟಪ ಸ್ಥಾಪಿಸಲು ಅನುದಾನ ಕೋರಿ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, 25 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.
ಈ ವೇಳೆ ಟ್ರಸ್ಟ್ ಅಧ್ಯಕ್ಷ ಟಿ.ತಿಪ್ಪೇರುದ್ರಪ್ಪ ಮಾತನಾಡಿ, 20 ವರ್ಷಗಳಿಂದ ರಾಷ್ಟ್ರೀಯ ಬಸವದಳ ಸ್ಥಾಪನೆ ಮಾಡಿಕೊಂಡು ಧರ್ಮ ಪ್ರಚಾರ ಮತ್ತು ವಚನಗಳ ಜಾಗೃತಿಯಿಂದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಬಸವದಳ ಟ್ರಸ್ಟ್ ಕಾರ್ಯಗಳಿಗೆ ಸಹಕಾರ ಆಗುವಂತೆ ಸೋಮಶೇಖರಪ್ಪ ಎಂಬ ದಾನಿಗಳು 50*100 ಅಳತೆ ನಿವೇಶನ ನೀಡಿದ್ದಾರೆ. ಇಲ್ಲಿ ಸ್ಥಾಪಿಸುವ ಬಸವ ಮಂಟಪವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪದಾಧಿಕಾರಿಗಳಾದ ಕೆ.ಟಿ.ಸ್ವಾಮಿ, ಜಿ.ಎಚ್.ಹನುಮಂತಪ್ಪ, ಬಿ.ಚಂದ್ರಣ್ಣ, ಸಿದ್ದರಾಮಣ್ಣ, ಸಣ್ಣ ತಿಪ್ಪಮ್ಮ, ಹನುಮಂತರೆಡ್ಡಿ, ವೆಂಕಟೇಶರೆಡ್ಡಿ, ಶ್ರೀಕಂಠಪ್ಪ, ಮಾರಣ್ಣ ಮತ್ತಿತರರಿದ್ದರು.