ಜಿಲ್ಲೆ

ಧನಸಹಾಯಕ್ಕೆ ಸಿಪಿಐ ಕಾರ್ಯಕರ್ತರ ಆಗ್ರಹ

Chitradurga

ಚಳ್ಳಕೆರೆ: ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪ್ರತಿ ಕುಟುಂಬಗಳಿಗೆ 7500 ರೂ. ಧನಸಹಾಯ ನೀಡುವಂತೆ ಸಿಪಿಐ ಕಾರ್ಯಕರ್ತರು ಮಂಗಳವಾರ ತಾಲೂಕು ಕಚೇರಿ ಶಿರಸ್ತೇದಾರ್ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿವ್ಯಕ್ತಿಗೆ ಮಾಸಿಕವಾಗಿ 10 ಕೆಜಿಯಂತೆ 6 ತಿಂಗಳು ಉಚಿತವಾಗಿ ಆಹಾರ ಪದಾರ್ಥ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ 200 ದಿನ ಉದ್ಯೋಗ ನೀಡಬೇಕು.

ಗ್ರಾಮೀಣ ಮತ್ತು ನಗರ ಪ್ರದೇಶದವರಿಗೂ ದುಡಿಯುವ ಕೈಗಳಿಗೆ ಖಾತ್ರಿ ಕೆಲಸ ಕೊಡಬೇಕು. ಕರೊನಾ ನಿರ್ವಹಣೆಯಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಸೌಕರ್ಯಗಳ ಕೊರತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಕಾರ್ಯಕರ್ತರಾದ ಟಿ.ತಿಪ್ಪೇಸ್ವಾಮಿ, ಟಿ.ನಿಂಗಣ್ಣ, ಕೆ.ವಿ.ವೀರಭದ್ರಪ್ಪ, ಕೆ.ಬಿ.ಜಯಣ್ಣ ಮತ್ತಿತರರಿದ್ದರು.