ಜಿಲ್ಲೆ

ಎಲ್‌ಐಸಿ ಖಾಸಗೀಕರಣಕ್ಕೆ ವಿರೋಧ

ಚಳ್ಳಕೆರೆ: ಎಲ್‌ಐಸಿ ಅನ್ನು ಖಾಸಗೀಕರಣ ಗೊಳಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಎಲ್‌ಐಸಿ ಶಾಖಾ ಕಚೇರಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಂಬಿಕೆ ಅರ್ಹವಾಗಿರುವ ಎಲ್‌ಐಸಿಯಲ್ಲಿ ಕೂಲಿ ಕಾರ್ಮಿಕರು ಸೇರಿ ನೌಕರರು ಬದುಕಿನ ಭದ್ರತೆಗೆ ಹಣ ತೊಡಗಿಸಲಾಗುತ್ತದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಸಾರ್ವಜನಿಕವಾಗಿ ಎಲ್‌ಐಸಿಯ ಬಗ್ಗೆ ನಂಬಿಕೆ ಕಳೆದುಕೊಳ್ಳಲಾಗುತ್ತದೆ. ಕೂಡಲೇ ಖಾಸಗೀಕರಣದ ಮಾರಾಟ ವ್ಯವಹಾರಕ್ಕೆ ಎಲ್‌ಐಸಿಯ ಷೇರುಗಳನ್ನು ಬಳಸಬಾರದು ಎಂದು ಆಗ್ರಹಿಸಿದರು.

ಶಾಖಾ ವ್ಯವಸ್ಥಾಪಕ ಜಿ.ರಮೇಶ್, ಅಭಿವೃದ್ಧಿ ಅಧಿಕಾರಿಗಳಾದ ಬಿ.ತಿಪ್ಪೇಸ್ವಾಮಿ, ತೋಯಪ್ಪ, ಟಿ.ರಾಜು, ತಿಮ್ಮಣ್ಣ ಇದ್ದರು.