ಜಿಲ್ಲೆ

ಆನ್‌ಲೈನ್ ಪರೀಕ್ಷೆ ಪದ್ಧತಿಗೆ ವಿರೋಧ

Chitradurga

ಚಳ್ಳಕೆರೆ: ಐಟಿಐ ವಿದ್ಯಾರ್ಥಿಗಳಿಗೆ ಜಾರಿ ಮಾಡಿರುವ ಆನ್‌ಲೈನ್ ಪರೀಕ್ಷೆ ಪದ್ಧತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವೈಒ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಆನ್‌ಲೈನ್ ಪರೀಕ್ಷೆ ಪದ್ಧತಿಯಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತಿದೆ. ಐಟಿಐ ಕಾಲೇಜು ಆಡಳಿತ ಮಂಡಳಿಗಳೇ ಈ ಕುರತು ತಯಾರಿ ಮಾಡಿಕೊಂಡಿಲ್ಲ. 2019ರ ಪರೀಕ್ಷೆ ನಡೆಸುವ ಮುನ್ನವೇ ಆನ್‌ಲೈನ್ ಪರೀಕ್ಷೆ ಪದ್ಧತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಐಟಿಐ ಪರೀಕ್ಷಾ ಶುಲ್ಕಕ್ಕೆ ಜಿಎಸ್‌ಟಿ ಹಾಕುವ ಕ್ರಮ ಕೈಬಿಡಬೇಕು. ಐಟಿಐ ಶಿಕ್ಷಣವನ್ನು ಬಡಕುಟುಂಬದ ವಿದ್ಯಾರ್ಥಿಗಳು ಕಲಿಯಲಾಗುತ್ತದೆ. ವಾರ್ಷಿಕವಾಗಿ ತಗುಲುವ ಶುಲ್ಕವನ್ನೇ ಕಟ್ಟಲು ಶಕ್ತರಿರುವುದಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣ ಪಡೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಬಳಿಕ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು. ನಗರದ ವಿವಿಧ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.