ಜಿಲ್ಲೆ

ಹೊನ್ನೂರಲ್ಲಿ ಆಂಜನೇಯ ಕಾರ್ತಿಕ

Chitradurga

ಚಳ್ಳಕೆರೆ: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶುಕ್ರವಾರ ಆಂಜನೇಯಸ್ವಾಮಿ ಕಾರ್ತಿಕೋತ್ಸವ ಸಂಭ್ರಮದಿಂದ ಜರುಗಿತು.

ಗ್ರಾಮದ ದೇವಸ್ಥಾನದಿಂದ ಪಾದಗಟ್ಟೆಯವರೆಗೂ ಭಕ್ತರು ರಥವನ್ನು ಎಳೆದು ಭಕ್ತಿ ಮೆರೆದರು. ಹರಕೆ ಮಾಡಿಕೊಂಡಿದ್ದ ಭಕ್ತರು ತೇರಿಗೆ ಹೂ, ಹಣ್ಣು ತೂರಿ ಪುನೀತರಾದರು.

ಗ್ರಾಪಂ ಸದಸ್ಯರಾದ ಮಂಜುನಾಥರೆಡ್ಡಿ, ನಾಗೇಂದ್ರಪ್ಪ, ಯಶೋಧಮ್ಮ, ಎಂ.ಪ್ರಕಾಶ್, ಮುಖಂಡರಾದ ಜಿ.ಮಹಮ್ಮದ್ ಕಲೀಮ್, ಎಚ್.ವಿ.ಪ್ರಕಾಶ್, ಶಿವಣ್ಣ, ನಾಗೇಂದ್ರಪ್ಪ, ಜಯಶೀಲರೆಡ್ಡಿ, ರಾಘವರೆಡ್ಡಿ, ಗುರುಸ್ವಾಮಿ ಮತ್ತಿತರರು ಭಾಗವಹಿಸಿದ್ದರು.