ಜಿಲ್ಲೆ

ಗಂಗಾಕಲ್ಯಾಣ ಕುಟುಂಬಕ್ಕೆ ಅಕ್ಷಯ ಪಾತ್ರೆ

Chitradurga

ಚಳ್ಳಕೆರೆ: ಗಂಗಾ ಕಲ್ಯಾಣ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಕೃಷಿಕರು ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ಸಾಣೀಕೆರೆ ಗ್ರಾಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರಿಸುವುದಕ್ಕೆ ಚಾಲನೆ ನೀಡಿ ಮಾತನಾಡಿದರು.

2018-19ನೇ ಸಾಲಿನಲ್ಲಿ ನಿಗಮದ ವತಿಯಿಂದ 146 ಫಲಾನುಭವಿಗಳನ್ನು ಸೌಲಭ್ಯಕ್ಕೆ ಗುರುತಿಸಲಾಗಿದೆ. ಈ ಯೋಜನೆ ಇಡೀ ಕುಟುಂಬಕ್ಕೆ ಒಂದು ಅಕ್ಷಯ ಪಾತ್ರೆ ಇದ್ದಂತೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ತಾಲೂಕು ಅಧಿಕಾರಿ ಟಿ.ಮೂರ್ಕಣಪ್ಪ, ಸಹಾಯಕ ಚೌಳೂರು ನಿಂಗಪ್ಪ, ತಾಪಂ ಸಮಾಜಿಕ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ನಗರಸಭಾ ಸದಸ್ಯ ಬಿ.ಟಿ.ರಮೇಶಗೌಡ, ಹರೀಶ್, ತಳವಾರ್ ರಂಗಪ್ಪ ಮತ್ತಿತರರು ಇದ್ದರು.