ಜಿಲ್ಲೆ

ವಿದ್ಯುತ್ ತಂತಿ ಬದಲಾವಣೆ

Chitradurga

ಚಳ್ಳಕೆರೆ: ಇಲ್ಲಿ ಗಾಂಧಿನಗರ ಪಾರ್ಕ್ ರಸ್ತೆ ಭಾಗದಲ್ಲಿ ವಿದ್ಯುತ್ ತಂತಿ ಬದಲಾವಣೆ ಮಾಡಲಾಗಿದೆ ಎಂದು ಸಹಾಯಕ ನಿರ್ವಾಹಕ ಇಂಜಿನಿಯರ್ ತಿಮ್ಮರಾಜ್ ತಿಳಿಸಿದ್ದಾರೆ.

ಇಲ್ಲಿನ 11 ಕೆವಿ ಹೈಓಲ್ಟೇಜ್ ವಿದ್ಯುತ್ ತಂತಿಗೆ ಅಳಿಲು ಸಿಲುಕಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾಗಿತ್ತು. ಇದರಿಂದ ಮನೆಗಳಲ್ಲಿನ ಟಿವಿ, ಫ್ರಿಜ್, ವಿದ್ಯುತ್ ದೀಪ ಪರಿಕರಗಳು ಹಾನಿಯಾಗಿದ್ದವು. ಕೂಡಲೇ ಕ್ರಮ ಕೈಗೊಂಡು ಗುಣಮಟ್ಟದ ವಿದ್ಯುತ್ ತಂತಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.