ಜಿಲ್ಲೆ

ಪಿಎಲ್‌ಡಿ ಬ್ಯಾಂಕ್‌ಗೆ ವಾರದೊಳಗೆ ಬಾಡಿಗೆ ಬಾಕಿ ಪಾವತಿ

Chitradurga

ಚಳ್ಳಕೆರೆ: ಪಿಎಲ್‌ಡಿ ಬ್ಯಾಂಕ್‌ಗೆ 13 ವರ್ಷಗಳ ಬಾಡಿಗೆ ಬಾಕಿ ಹಣವನ್ನು ವಾರದೊಳಗೆ ಪಾವತಿಸುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಸೂಚಿಸಿದರು.

ನಗರದ ಪಿಎಲ್‌ಡಿ ಬ್ಯಾಂಕ್‌ಗೆ ಶನಿವಾರ ಭೇಟಿ ನೀಡಿದ್ದ ಅಧ್ಯಕ್ಷರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ಬಾಡಿಗೆ ಕೊಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿ ಸಮಸ್ಯೆ ಇತ್ಯರ್ಥಪಡಿಸಲು ತಾಕೀತು ಮಾಡಿದರು.

ಜಿಪಂ ಇಂಜಿನಿಯರಿಂಗ್ ಉಪವಿಭಾಗವು ಕಚೇರಿ ನಿರ್ವಹಣೆಗೆ ಬ್ಯಾಂಕ್ ಕಟ್ಟಡವನ್ನು 13 ವರ್ಷ ಬಳಸಿಕೊಂಡಿತ್ತು. ಈವರೆಗೂ ಬಾಡಿಗೆ ನೀಡಿಲ್ಲ ಎಂದು ದೂರಿದ್ದರಿಂದ ಸಂಬಂಧಿತ ಅಧಿಕಾರಿಗಳಿಗೆ ಹಣ ಪಾವತಿಸುವಂತೆ ಸೂಚಿಸಿದರು.ವಾರದೊಳಗೆ ಬಾಕಿ ಬಾಡಿಗೆ ಹಣ ಪಾವತಿ ಮಾಡುವುದಾಗಿ ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾತೃಶ್ರೀ ಮಂಜುನಾಥ, ಉಪಾಧ್ಯಕ್ಷೆ ತಿಪ್ಪಮ್ಮ, ನಿರ್ದೇಶಕರಾದ ಕೆ.ಜಲ್ದೀರಪ್ಪ, ಸಂದೀಪ್, ಎಂ.ಶಿವಣ್ಣ, ಬಿ.ನಾಗರಾಜ, ಜಗನ್ನಾಥ್, ಸಿದ್ದಿಕ್, ವ್ಯವಸ್ಥಾಪಕ ಪ್ರಭು, ಮುಖಂಡ ಕಂದಿಕೆರೆ ಸುರೇಶ್‌ಬಾಬು ಇತರರಿದ್ದರು.