ಚಳ್ಳಕೆರೆ: ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜೆ.ಎಸ್.ಮುತ್ತುರಾಜ್ ಹೇಳಿದರು.
ಪಗಡಲಬಂಡೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಮಹಿಳೆಯರ ರಕ್ಷಣೆಗೆ ಅನೇಕ ಕಾನೂನು ಜಾರಿಗಳಿಸಿದ್ದು, ಅವುಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಕೆ.ಬೊಮ್ಮಲಿಂಗಪ್ಪ, ಸದಸ್ಯೆ ಲಕ್ಷ್ಮೀದೇವಿ, ಸಿಬ್ಬಂದಿ ಟಿ.ದೇವರಾಜ್, ಜಿ.ಸಿದ್ದೇಶ್, ವೀರೇಂದ್ರ ಇದ್ದರು.