ಜಿಲ್ಲೆ

ಕರೊನಾ ಚೆಕ್ ಪೋಸ್ಟ್ ಸ್ಥಾಪಿಸಿ

Chitradurga

ಚಳ್ಳಕೆರೆ: ಸಾರ್ವತ್ರಿಕ ಚುನಾವಣೆ ವೇಳೆ ಅಕ್ರಮ ತಡೆಗೆ ಚೆಕ್ ಪೋಸ್ಟ್ ಸ್ಥಾಪಿಸುವ ರೀತಿ ಕರೊನಾ ಚೆಕ್ ಪೋಸ್ಟ್ ಸ್ಥಾಪಿಸಬೇಕು ಎಂದು ವಿಶ್ವಪಥ ವೇದಿಕೆ ಮುಖಂಡ ನಿಸರ್ಗ ಗೋವಿಂದರಾಜು ಸಲಹೆ ನೀಡಿದ್ದಾರೆ.

ಹೊರ ಜಿಲ್ಲೆ, ಹೊರ ರಾಜ್ಯದಿಂದ ಆಗಮಿಸುವವರನ್ನು ಆರೋಗ್ಯ ತಪಾಸಣೆ ನಡೆಸಿ ಪ್ರವೇಶಕ್ಕೆ ಅನುಮತಿ ಕೊಡಬೇಕು. ಇದರಿಂದ ಕರೊನಾ ರೋಗ ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ತಕ್ಷಣ ಕ್ರಮಕೈಗೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.