ಚಳ್ಳಕೆರೆ: ಜೂ.14ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಝೂಮ್ ಆಪ್ ಮೂಲಕ ರಾಜ್ಯಾದ್ಯಂತ ಕಾರ್ಯಕರ್ತರೊಂದಿಗೆ ಭಾನುವಾರ ಸಮಾಲೋಚನೆ ನಡೆಸಿದರು.
ಚಳ್ಳಕೆರೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ವೀಕ್ಷಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಇತರರೊಂದಿಗೆ ಪಕ್ಷ ಸಂಘಟನೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ನಗರ ಅಭಿಷೇಕ್ ನಗರ ಮತ್ತು ಪರಶುರಾಂಪುರ ಭಾಗದಲ್ಲೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಕೆಪಿಸಿಸಿ ವೀಕ್ಷಕರಾದ ಇಕ್ಬಾಲ್ ಅಹಮ್ಮದ್, ಡಿಸಿಸಿ ವೀಕ್ಷಕ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಮುಖಂಡರಾದ ಎಸ್.ಎಚ್.ಸೈಯದ್, ಕೆ.ವೀರಭದ್ರಯ್ಯ, ಲಕ್ಷ್ಮೀದೇವಿ, ಜಿ.ವೀರೇಶ್, ಗೀತಾಬಾಯಿ, ವೈ.ಪ್ರಕಾಶ್, ಎಸ್.ಮುಜೀಬುಲ್ಲಾ, ಆರ್.ಮಂಜುಳಾ, ಬಿ.ಟಿ.ರಮೇಶ್‌ಗೌಡ, ಟಿ.ಮಲ್ಲಿಕಾರ್ಜುನ, ಸುಮಾ, ವಿರುಪಾಕ್ಷ, ಜಿ.ಬಸವರಾಜ, ಉಷಾ, ಕರೀಕೆರೆ ರಾಜಣ್ಣ, ಇಸ್ಮಾಯಿಲ್, ಜಮರ್ ಉನ್ನೀಸಾ, ನಾಗಲಕ್ಷ್ಮಿ, ಹನುಮಂತಪ್ಪ, ಶಿವಸ್ವಾಮಿ, ಮಹೇಶ್, ಸಿ.ಟಿ.ರಾಘವೇಂದ್ರ ಮತ್ತಿತರರು ಇದ್ದರು.