ಜಿಲ್ಲೆ

ಅರ್ಹರಿಗೆ ಮತದಾನದ ಹಕ್ಕು

Chitradurga

ಚಳ್ಳಕೆರೆ; ಅರ್ಹರೆಲ್ಲರೂ ಮತದಾನದ ಹಕ್ಕು ಪಡೆಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕು ಎಂದು ಮುಖ್ಯಶಿಕ್ಷಕ ಕೆ.ಜಿ.ಪ್ರಶಾಂತ್ ಹೇಳಿದರು.

ತಾಲೂಕಿನ ಕೊರ‌್ಲಕುಂಟೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಯುವ ಮತದಾರರ ಮಿಂಚಿನ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.

18 ವರ್ಷ ತುಂಬಿದ ಯುವಕ-ಯುವತಿಯರು ನಿಗದಿತ ದಾಖಲೆಗಳೊಂದಿಗೆ ಬೂತ್ ಹಂತದ ಅಧಿಕಾರಿಗಳಲ್ಲಿ ಚುನಾವಣಾ ಗುರುತಿನ ಚೀಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮತದಾನ ದೇಶದ ಪ್ರತಿ ಪ್ರಜೆಯ ಹಕ್ಕು. ಇದನ್ನು ಸಾರ್ವತ್ರಿಕ ಚುನಾವಣೆಗಳಲ್ಲಿ ಚಲಾಯಿಸಿ ಜನತಂತ್ರ ವ್ಯವಸ್ಥೆ ಸುಭದ್ರವಾಗಿಸಬೇಕು. ಸ್ಥಿತಿ ಸರ್ಕಾರ ಸ್ಥಾಪನೆಗೆ ಮತದಾನವೇ ಪ್ರಧಾನ ಅಸ್ತ್ರ ಎಂದು ತಿಳಿಸಿದರು.

ಗ್ರಾಮಸ್ಥರಾದ ಸಿದ್ಧಲಿಂಗಪ್ಪ, ಸಿ.ನಿಂಗಪ್ಪ, ಹನುಮಂತಪ್ಪ, ಈಶ್ವರಪ್ಪ, ದಾನಪ್ಪ, ಶಿಕ್ಷಕರಾದ ಮಂಜುನಾಥ, ಸದಾನಂದಪ್ಪ, ಕರಿಯಪ್ಪ, ಉಮೇಶ್ ಮತ್ತಿತರರಿದ್ದರು.