ಜಿಲ್ಲೆ

ದೇಶದ ಯಾರೊಬ್ಬರಿಗೂ ತೊಂದರೆ ಇಲ್ಲ

Chitradurga

ಚಳ್ಳಕೆರೆ: ದೇಶದ ಪ್ರತಿ ಪ್ರಜೆಗೂ ಸೌಲಭ್ಯ ಮತ್ತು ಸಮಾನ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಜಾರಿಯಾಗಲಿರುವ ಎನ್‌ಆರ್‌ಸಿ ಕಾಯ್ದೆ ಬಗ್ಗೆ ಕೆಲ ಪಕ್ಷಗಳು ಜನರಲ್ಲಿ ತಪ್ಪು ಅಭಿಪ್ರಾಯ ಬಿತ್ತುತ್ತಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹೇಳಿದರು.

ನಗರದ ಪ್ರಮುಖ ಬೀದಿಗಳಲ್ಲಿ ತಾಲೂಕು ಮಂಡಲ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎನ್‌ಆರ್‌ಸಿ ಕಾಯ್ದೆ ಜನ ಜಾಗೃತಿ ಅಭಿಯಾನದಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರ ವಿತರಿಸಿ ಮಾತನಾಡಿದರು.

ಎನ್‌ಆರ್‌ಸಿ ಕಾಯ್ದೆ ಜಾರಿಯಿಂದ ಯಾರಿಗೂ ತೊಂದರೆ ಇಲ್ಲ. ಕೆಲ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ ಜನರಲ್ಲಿ ಗೊಂದಲ ಉಂಟು ಮಾಡುತ್ತಿವೆ. ಕೇಂದ್ರ ಸರ್ಕಾರಕ್ಕೆ ಜನಪರ ಕಾಳಜಿ ಇದೆ. ಇತರೆ ಪಕ್ಷಗಳ ಯಾವುದೇ ಪಿತೂರಿ ಫಲಿಸುವುದಿಲ್ಲ ಎಂದರು.

ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಮಂಡಲ ಮಾಜಿ ಅಧ್ಯಕ್ಷರಾದ ಆದಿ ಭಾಸ್ಕರಶೆಟ್ಟಿ, ಸೋಮಶೇಖರ ಮಂಡಿಮಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ, ವಕ್ತಾರ ದಿನೇಶ್‌ರೆಡ್ಡಿ, ಗ್ರಾಪಂ ಸದಸ್ಯರಾದ ಬಂಡೆ ರುದ್ರಪ್ಪ, ಜಿ.ರೂಪೇಶ್, ಶೈಲಪ್ಪ, ಮುಖಂಡರಾದ ಮಾತೃಶ್ರೀ ಮಂಜುನಾಥ್, ಅಂಗಡಿ ರಾಜಣ್ಣ, ಶಾಂತಪ್ಪ ಮತ್ತಿತರರಿದ್ದರು.