ಜಿಲ್ಲೆ

ಪುರ‌್ಲಹಳ್ಳಿ ರಸ್ತೆಗೆ ಮುಳ್ಳಿನ ಬೇಲಿ

Chitradurga

ಚಳ್ಳಕೆರೆ: ಕರೊನಾ ಭೀತಿಯಿಂದ ತಾಲೂಕಿನ ಪುರ‌್ಲಹಳ್ಳಿ ಜನರು ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ನಾಲ್ಕು ಭಾಗದಲ್ಲಿ ಕಳ್ಳೆ ಹಾಕಿ ನಿರ್ಬಂಧ ಹಾಕಿದ್ದಾರೆ.

ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿರುವ 75ಕ್ಕೂ ಅಧಿಕ ಜನರ ರಕ್ತ ಪರೀಕ್ಷೆ ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಜಾಗೃತಿಗಾಗಿ ಸರ್ಕಾರದ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡುತ್ತೇವೆ. ಊರಲ್ಲಿನ ಸ್ವಚ್ಛತೆಗೆ ಸ್ವಯಂ ಪ್ರೇರಿತರಾಗಿ ಸಹಕಾರ ಮಾಡುತ್ತಿದ್ದೇವೆ ಎಂದು ಮುಖಂಡ ಮಂಜುನಾಥ ತಿಳಿಸಿದರು.

ಗ್ರಾಮಸ್ಥರಾದ ಹನುಮಂತರಾಯ, ತಿಪ್ಪೇಸ್ವಾಮಿ, ರವಿ, ಅಂಗಡಿ ಹೊನ್ನೇಶ್, ರಮೇಶ್, ನಾಗೇಶ್, ಪತ್ರಿಕಾ ಪ್ರತಿನಿಧಿ ಎಚ್.ಲಂಕೇಶ್ ಮತ್ತಿತರರು ಉಪಸ್ಥಿತರಿದ್ದರು.