ಜಿಲ್ಲೆ

ಚಳ್ಳಕೆರೆ ಹಲವರ ಬಂಧನ, ಬಿಡುಗಡೆ

Chitradurga

ಚಳ್ಳಕೆರೆ: ನಗರದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರನ್ನು ನೆಹರು ವೃತ್ತದಲ್ಲಿ ಬಂಧಿಸಿದ ಪೊಲೀಸರು ವೃತ್ತ ನಿರೀಕ್ಷಕರ ಕಚೇರಿಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರು ಮತ್ತು ಕೂಲಿ ಕಾರ್ಮಿಕರನ್ನು ಸಾಲದಿಂದ ಋಣ ಮುಕ್ತಗೊಳಿಸಬೇಕು. ಕೂಡಲೇ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘಟನೆಯ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಆರ್.ಎ.ದಯಾನಂದ ಮೂರ್ತಿ, ಕೆ.ಸಿ.ಶ್ರೀಕಂಠಮೂರ್ತಿ, ಹಿರೇಹಳ್ಳಿ ಯರ‌್ರಿಸ್ವಾಮಿ, ಬಿ.ಜಿ.ತಿಪ್ಪೇಸ್ವಾಮಿ, ಸಿಐಟಿಯು ಸಂಘಟನೆಯ ಸಿ.ವೈ.ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಟಿ.ತಿಪ್ಪೇಸ್ವಾಮಿ ಇದ್ದರು.

ನೀರಸ ಪ್ರತಿಕ್ರಿಯೆ: ಮುಷ್ಕರದಿಂದ ಸಾರ್ವಜನಿಕರ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಎಂದಿನಂತೆ ಬಸ್ ಸಂಚಾರ ಸೇರಿ ವ್ಯಾಪಾರ ವಹಿವಾಟುಗಳು ನಡೆಸಲಾಯಿತು.ನೆಹರು ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.