ಬೇಲೂರು: ಸಮುದಾಯದ ಅಭಿವೃದ್ಧಿಗೆ ಛಲವಾದಿ ಮಹಾಮಂಡಲ ಹಲವು ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಘಟನೆ ಕಟ್ಟುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರವಾಸ ನಡೆಸಲಾಗುತ್ತದೆ ಎಂದು ಛಲವಾದಿ ಮಹಾ ಮಂಡಲದ ಅಧ್ಯಕ್ಷ ಪುಟ್ಟರಾಜಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಛಲವಾದಿ ಮಹಾ ಮಂಡಲದ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಾಗೃತಿ ಮೂಡಿಸಿ ಸಮಾಜದ ಮುನ್ನಲೆಗೆ ಸಮುದಾಯವನ್ನು ಕರೆ ತರುವ ಕೆಲಸ ಮಾಡಬೇಕು. ಇದರೊಂದಿಗೆ ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ಘಟಕಗಳನ್ನು ಸ್ಥಾಪಿಸಿ, ಸಂಘಟನೆ ಮಾಡಲು ಮುಂದಾಗುವ ಮೂಲಕ ಸಮುದಾಯದ ಏಳ್ಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಸಂಘಟನೆ ತಾಲೂಕು ಅಧ್ಯಕ್ಷ ಸ್ವಾಮಿ(ಯೋಗೇಶ್) ಮಾತನಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಜವರಯ್ಯ, ಉಪಾಧ್ಯಕ್ಷ ಜಯದೇವಯ್ಯಸ್ವಾಮಿ. ತಾಲೂಕು ಗೌರವಾಧ್ಯಕ್ಷ ರಾಜಗೆರೆ ನಿಂಗರಾಜು, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ವಸಂತಕುಮಾರ್, ಮುಖಂಡರಾದ ಜುಂಜಯ್ಯ, ಲಿಂಗರಾಜು, ಮೋಹನ್, ಹೊಸಳ್ಳಿ ಕುಮಾರ್, ಶಾಂತರಾಜು, ದೊರೆಸ್ವಾಮಿ, ರಾಮದಾಸ್ ಇತರರು ಇದ್ದರು.