ಜಿಲ್ಲೆ

ಯಮನೂರಲ್ಲಿ ಗೃಹಲಕ್ಷ್ಮಿಗೆ ಚಾಲನೆ

ನವಲಗುಂದ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮಿಯೋಜನೆಗೆ ಬುಧವಾರ ತಾಲೂಕಿನ ಯಮನೂರ ಗ್ರಾಮ ಪಂಚಾಯಿತಿಯಲ್ಲಿ ಚಾಲನೆ ನೀಡಲಾಯಿತು. ತಾಲೂಕು ಪಂಚಾಯಿತಿ ಇಒ ಭಾಗ್ಯಶ್ರೀ ಜಹಗೀರದಾರ ಮಾತನಾಡಿ, ಗೃಹಲಕ್ಷ್ಮಿಯೋಜನೆ ಮುಖಾಂತರ ರಾಜ್ಯದ 1.20 ಕೋಟಿಗೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಜಮೆ ಆಗಲಿದೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿ, ಪಿಡಬ್ಲ್ಯುಡಿ ಹಿರಿಯ ಇಂಜಿನಿಯರ್ ಎಸ್.ಎಸ್. ಸಿದ್ದಾಪುರ, ಪಿಡಬ್ಲ್ಯುಡಿ ಕಿರಿಯ ಇಂಜಿನಿಯರ್ ನಿಖಿಲ್ ಮರಡಿಶೆಟ್ಟರ್, ಗ್ರಾಪಂ ಸದಸ್ಯರಾದ ಮಹಾಂತೇಶ ಗುನ್ನಾರ, ನೀಲವ್ವ ಸಂಜೀವಣ್ಣವರ, ಸೋಮೇಶ ತೋಟದ, ಗ್ರಾಮದ ಹಿರಿಯ ಆರ್.ಎಂ. ಸರನಾಡಗೌಡರ, ಗ್ರಾಮ ಪಂಚಾಯಿತಿ ಸಂಜೀವಿನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳಾದ ಸರೋಜಾ ಕುರುವತ್ತಿಮಠ, ಚನ್ನಮ್ಮಾ ದೊಡ್ಡಮನಿ, ವಿಜಯಲಕ್ಷ್ಮಿ ಪತ್ತಾರ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಗುಡದೂರಮಠ ಕಾರ್ಯಕ್ರಮ ನಿರ್ವಹಿಸಿದರು.