ಜಿಲ್ಲೆ

ಚೈತನ್ಯ ಪಿಯು ಕಾಲೇಜ್ ಗೆಲುವು

Davangere - Desk - Mahesh Babu E

ಚಿತ್ರದುರ್ಗ: ನಗರದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹೊಳಲ್ಕೆರೆ ರಸ್ತೆಯ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಕಬ್ಬಡಿ ಪಂದ್ಯದಲ್ಲಿ ಹರ್ಷ ನೇತೃತ್ವದ ತಂಡ ಪ್ರಥಮ, ಬಾಲಕಿಯರ ವಿಭಾಗದ ಈಜು ಸ್ಪರ್ಧೆಯ ಫ್ರೀ ಸ್ಟೈಲ್‌ನಲ್ಲಿ ವಸುಂಧರಾ ಪ್ರಥಮ ಸ್ಥಾನ ಗಳಿಸಿದ್ದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ವಿದ್ಯಾರ್ಥಿನಿ ಜಿ.ಎಸ್.ಜ್ಯೋತಿ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.

ಸಂಸ್ಥೆ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ಎಸ್.ಎಂ.ಮಧು, ನಿರ್ದೇಶಕಿ ರಕ್ಷಾ ಮಧು, ಪ್ರಾಚಾರ್ಯ ಪೂರ್ಣಬೋಧಾಚಾರ್, ಉಪ ಪ್ರಾಚಾರ್ಯ ಎನ್.ಎಸ್.ಅಜೇಯ್, ದೈಹಿಕ ಶಿಕ್ಷಣ ಉಪನ್ಯಾಸಕ ಈರಣ್ಣ ಇತರರಿದ್ದರು.