ಮಡಿಕೇರಿ: ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜಿನ ಹಳೆ ವಿದ್ಯಾರ್ಥಿಗಳ "ಚಡ್ಡಿದೋಸ್ತ್" ಬಳಗ ವತಿಯಿಂದ ಗುಡ್ಡೆಹೊಸೂರು ಐಎನ್‌ಎಸ್ ಅಕಾಡಮಿ ಮೈದಾನದಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ’ಕೊಡಗು ಶಿಕ್ಷಕರ ತಂಡ’ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಶಿಕ್ಷಕರ ತಂಡ ನಿಗದಿತ ೬ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೭೨ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಚಡ್ಡಿದೋಸ್ತ್ ಬಿ ತಂಡ ೨ ವಿಕೆಟ್‌ಗೆ ೩೩ ರನ್ ದಾಖಲಿಸಿ ೩೯ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ಪರಿಣಾಮ ಸತತ ಮೂರನೇ ಬಾರಿ ಶಿಕ್ಷಕರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಚಡ್ಡಿದೋಸ್ತ್ ಬಿ ತಂಡ ಮೊದಲ ಬಾರಿಗೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತ್ತು.
ಲೀಗ್ ಮಾದರಿಯಲ್ಲಿ ನಡೆದ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಟಾಸ್ ಸೋತ ಶಿಕ್ಷಕರ ತಂಡ ೬ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೪೯ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಕಂದಾಯ ಇಲಾಖೆ ತಂಡ ೨ ವಿಕೆಟ್‌ಗೆ ೩೬ ರನ್‌ಗಳಿಸಿ ಸೋಲುಂಡಿತ್ತು. ಎ ಗುಂಪಿನ ಮೊದಲ ಪಂದ್ಯದಲ್ಲಿ ಟಾಸ್ ಸೋತ ಚಡ್ಡಿದೋಸ್ತ್ ಬಿ ತಂಡ ನಿಗದಿತ ಓವರ್‌ನಲ್ಲಿ ೫ ವಿಕೆಟ್‌ಗೆ ೪೮ ರನ್ ಕಲೆ ಹಾಕಿತ್ತು. ಗುರಿಬೆನ್ನಟ್ಟಿದ ಚಡ್ಡಿದೋಸ್ತ್ ಎ ತಂಡ ೩೯ ರನ್ ದಾಖಲಿಸಿ ೯ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು.
ಬಿ ಗುಂಪಿನ ೨ನೇ ಪಂದ್ಯದಲ್ಲಿ ಟಾಸ್ ಗೆದ್ದ ಕಂದಾಯ ಇಲಾಖೆ ತಂಡ ನಿಗದಿತ ಓವರ್‌ನಲ್ಲಿ ೭ ವಿಕೆಟ್‌ಗೆ ೪೪ ರನ್ ಕಲೆ ಹಾಕಿತ್ತು. ಗುರಿಬೆನ್ನಟ್ಟಿದ ಕೊಡಗು ಪ್ರೆಸ್ ಕ್ಲಬ್ ತಂಡ ೫.೧ ಓವರ್‌ನಲ್ಲಿ ೩ ವಿಕೆಟ್ ನಷ್ಟಕ್ಕೆ ೪೫ ರನ್ ದಾಖಲಿಸಿ ಜಯಸಾಧಿಸಿತು. ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಚಡ್ಡಿದೋಸ್ತ್ ಎ ತಂಡ ನಿಗದಿತ ಓವರ್‌ನಲ್ಲಿ ೩ ವಿಕೆಟ್‌ಗೆ ೩೯ ರನ್ ಪೇರಿಸಿತು. ಗುರಿಬೆನ್ನಟ್ಟಿದ ಬಿ ತಂಡ ೪.೫ ಓವರ್‌ನಲ್ಲಿ ಗೆಲುವಿನ ದಡ ಸೇರಿತು.
ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಟಾಸ್ ಸೋತ ಶಿಕ್ಷಕರ ತಂಡ ೨ ವಿಕೆಟ್‌ಗೆ ೫೬ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಪ್ರೆಸ್ ಕ್ಲಬ್ ತಂಡ ೪ ವಿಕೆಟ್‌ಗೆ ೪೩ ರನ್ ದಾಖಲಿಸಿ ೧೩ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತ ಚಡ್ಡಿದೋಸ್ತ್ ಎ ತಂಡ ೪ ಓವರ್‌ನಲ್ಲಿ ೧ ವಿಕೆಟ್ ನಷ್ಟಕ್ಕೆ ೧೮ ರನ್ ಕಲೆ ಹಾಕಿತ್ತು. ಗುರಿಬೆನ್ನಟ್ಟಿದ ಬಿ ತಂಡ ೨.೫ ಓವರ್‌ನಲ್ಲಿ ಗೆಲುವಿನ ದಡ ಸೇರಿ ಫೈನಲ್ ಪ್ರವೇಶಿಸಿತು. ಕ್ರೀಡಾಕೂಟದ ಪಂದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶಿಕ್ಷಕರ ತಂಡದ ಪವೀಣ್ ಪಡೆದುಕೊಂಡರು.
ಉದ್ಘಾಟನಾ ಸಮಾರಂಭ: ಕ್ರಿಕೆಟ್ ಪಂದ್ಯವನ್ನು ಐಎನ್‌ಎಸ್ ಅಕಾಡಮಿಯ ಮಾಲೀಕ ಐಚೇಟ್ಟಿರ ಪೊನ್ನಪ್ಪ ಉದ್ಘಾಟಿಸಿದರೆ, ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ಅಧ್ಯಕ್ಷ ಎಲ್.ನವೀನ್‌ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳಗ ಸ್ಥಾಪಕಾಧ್ಯಕ್ಷ ಮೋಹನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ನವೀನ್ ವಹಿಸಿದರೆ, ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕಿ ಕಾವೇರಮ್ಮ, ಸರ್ಕಾರಿ ಜಿ.ಯಂ.ಪಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸುರ ನಂದ, ಭಾರತೀಯ ಯೋಧ ಕುಶಾಲನಗರದ ಕೆ.ಎಲ್.ಸುದೀಪ್, ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಾಲೆಯ ಸಿಬಿಆರ್ ಸಂಯೋಜಕ ಎಸ್.ಮುರುಗೇಶ್ ಹಾಗೂ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ದನುಕುಮಾರ್, ಕೆ.ಎಲ್.ಸುದೀಪ್ ಹಾಗೂ ಸರ್ಕಾರಿ ಜಿ.ಯಂ.ಪಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸುರ ನಂದ, ಸಮಾಜಸೇವಕ ಮತ್ತು ಕಲಾವಿದ ಮುರುಗೇಶ್‌ರನ್ನು ಕಾರ್ಯಕ್ರಮದಲ್ಲಿ "ಚಡ್ಡಿದೋಸ್ತ್" ಬಳಗ ವತಿಯಿಂದ ಸನ್ಮಾನಿಸಲಾಯಿತು.