ಚಡಚಣ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸಲು ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಜನಸಾಮಾನ್ಯರು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಚಡಚಣ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಈ ಕುರಿತು ಹೋರಾಟ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಮುಖಂಡ ಮಹಾದೇವ ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಪಕ್ಷವನ್ನು ಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಗರ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪರಮಾನಂದ ಕೋಳಿ ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರು ಬೆನ್ನೆಲುಬು. ಅವರ ಮಾರ್ಗದರ್ಶನ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು. ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಘೋಷಣೆಯನ್ನು ಮಾಜಿ ಶಾಸಕ ವಿಠ್ಠಲ ಕಠಕಧೋಂಡ ಮಾಡಿದರು.
ಅಧ್ಯಕ್ಷರಾಗಿ ಪರಮಾನಂದ ಕೋಳಿ, ಉಪಾಧ್ಯಕ್ಷರಾಗಿ ಪಪಂ ಸದಸ್ಯ ಇಲಾಹಿ ನದಾಫ್, ಪ್ರಧಾನ ಕಾರ್ಯದರ್ಶಿಯಾಗಿ ಪರಗೊಂಡ ಸಿಂಧೆ, ಸಹಕಾರ್ಯದರ್ಶಿಯಾಗಿ ಭೀಮಾಶಂಕರ ಆಲಕುಂಟೆ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಕಾಂತ ಸಾಲಗಾಂವ, ಖಜಾಂಚಿಯಾಗಿ ಸದಾಶಿವ ಪಾಟೀಲ ಹಾಗೂ ಪರಶುರಾಮ ಪೂಜೇರಿ ಆಯ್ಕೆಯಾದರು. ಪಪಂ ಸದಸ್ಯರಾದ ಜಟ್ಟೆಪ್ಪ ಬನಸೋಡೆ, ಸುರೇಶ ಜಂಗಲಗಿ, ಮುಖಂಡರಾದ ಚಂದ್ರಕಾಂತ ಸಿಂಧೆ, ಕಾಂತು ಮಾಡಗ್ಯಾಳ, ಶಬ್ಬೀರ್ ನದಾಫ್, ಶಿವಪ್ಪ ಕೋಳಿ, ಸುರೇಶ ಸಿಂಧೆ, ನಾಗೇಶ ಗಾಯಕವಾಡ, ಬಾಷಾಸಾಬ ಲೋಣಿ, ಬಾಬು ಕೊಂಕಣಿ, ಇಬ್ರಾಹಿಂ ಸೌದಾಗರ, ದಿಗಂಬರ ಸಿಂಧೆ, ಸಿದ್ದಲಿಂಗ ಬನಸೋಡೆ ಮತ್ತಿತರರಿದ್ದರು.