ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿಇಟಿ ವಿದ್ಯಾರ್ಥಿ ಮಿತ್ರ ತರಬೇತಿ ಕಾರ್ಯಕ್ರಮವನ್ನು ಪ್ರಾಂಶುಪಾಲ ಗೂಳೇಗೌಡ ಉದ್ಘಾಟಿಸಿದರು. ಡಾ.ರಾಘವೇಂದ್ರ, ಎಂ.ರವೀಶ್, ಬಸವಣ್ಣಸ್ವಾಮಿ, ರಂಗನಾಥ್, ಎನ್.ಕಲ್ಪನಾ ಇತರರು ಇದ್ದರು. 
ಜಿಲ್ಲೆ

ಸಿಇಟಿ ವಿದ್ಯಾರ್ಥಿ ಮಿತ್ರ ತರಬೇತಿ

ನಾಗೇಶ ಎಸ್

ಬನ್ನೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಿಇಟಿ ವಿದ್ಯಾರ್ಥಿ ಮಿತ್ರ ತರಬೇತಿ ಕಾರ್ಯಕ್ರಮವನ್ನು ಪ್ರಾಂಶುಪಾಲ ಗೂಳೇಗೌಡ ಉದ್ಘಾಟಿಸಿದರು.

ಸಿಇಟಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್‌ಗೆ ಭೇಟಿ ಕೊಟ್ಟು ಸಮಯ ವ್ಯರ್ಥ ಮಾಡುತ್ತಾರೆ. ಅರ್ಜಿ ಸಲ್ಲಿಸುವಾಗ ಅನೇಕ ಲೋಪದೋಷಗಳು ಉಂಟಾಗಿ ಅರ್ಜಿ ತಿರಸ್ಕೃತವಾಗುವ ಸಂದರ್ಭ ಇರುತ್ತದೆ. ಆದ್ದರಿಂದ ಕಾಲೇಜಿನ ಉಪನ್ಯಾಸಕರ ಮೂಲಕವೇ ಮಾಹಿತಿ ನೀಡಿ ವಿದ್ಯಾರ್ಥಿಗಳು ಸಮರ್ಪಕವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗಲಿ ಎಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಾಸ್ಟರ್ ಟ್ರೈನರ್ ಡಾ.ರಾಘವೇಂದ್ರ, ಎಂ.ರವೀಶ್, ಬಸವಣ್ಣಸ್ವಾಮಿ, ರಂಗನಾಥ್, ಎನ್.ಕಲ್ಪನಾ, ಅವಿನಾಶ್, ಕೆ.ಟಿ.ಭಾನುಮತಿ, ಕೆ.ನಂದೀಶ್‌ಕುಮಾರ್, ಎನ್. ಶಂಭುಲಿಂಗಯ್ಯ ಇತರರು ಇದ್ದರು.