ಜಿಲ್ಲೆ

ಎರಡು ಕಡೆ ಆಯ್ಕೆ ದಾಖಲಿಸಿದರೂ ಒಂದು ಕಡೆ ಮಾತ್ರ ಪರಿಗಣನೆ

djtrupti

ಬೆಂಗಳೂರು: ಯುಜಿ ನೀಟ್​ನಲ್ಲಿ ಸೀಟು ಸಿಕ್ಕಿ ಚಾಯ್ಸ್​ &1 ಆಯ್ಕೆ ಮಾಡಿರುವ ಅಭ್ಯರ್ಥಿಗಳು ಯುಜಿ ಸಿಇಟಿಯಲ್ಲಿ ದಾಖಲಿಸುವ ಆಪ್ಷನ್​ ಆಯ್ಕೆ ಮಾಡಿದ್ದರೂ ಅಂತಹ ಅಭ್ಯರ್ಥಿಗಳಿಗೆ ಸಿಇಟಿನಲ್ಲಿ ಸೀಟು ಹಂಚಿಕೆ ಮಾಡುವುದಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸ್ಪಷ್ಟವಾಗಿ ತಿಳಿಸಿದೆ.

ಬಹುತೇಕ ವಿದ್ಯಾರ್ಥಿಗಳು ಚಾಯ್ಸ್​ಗಳ ಮಹತ್ವ ತಿಳಿದಯೇ ಆಯ್ಕೆ ಮಾಡಿ ಆನಂತರ ಸೀಟು ಸಿಕ್ಕಿಲ್ಲ ಎಂಬ ಕಾರಣಕ್ಕೆ ಕೆಇಎಗೆ ಬಂದು ಚಾಯ್ಸ್​ ಬದಲು ಮಾಡುವಂತೆ ಮನವಿ ಮಾಡುವುದು ಸಾಮಾನ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಕೆಇಎ ನೀಟ್​ ಮತ್ತು ಸಿಇಟಿ ಎರಡಕ್ಕೂ ಆಯ್ಕೆ ದಾಖಲಿಸಿ, ನೀಟ್​ನಲ್ಲಿ ಚಾಯ್ಸ್​&1 ಅಯ್ಕೆ ಮಾಡಿದವರಿಗೆ ಸಿಇಟಿನಲ್ಲಿ ಸೀಟು ಹಂಚಿಕೆ ಮಾಡುವುದಿಲ್ಲ. ಇದನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. -ಚಾಯ್ಸ್​&1ರ ಅರ್ಥ, ಸಿಕ್ಕ ಸೀಟು ತೃಪ್ತಿಕರವಾಗಿದೆ ಎಂದು ಖಚಿತ ಪಡಿಸುವುದಾಗಿದೆ. ಬಹುತೇಕ ವಿದ್ಯಾರ್ಥಿಗಳು ಸೀಟುಗಳನ್ನು ಖಚಿತ ಪಡಿಸಿ ಆನಂತರ ಕಣ್ತಪ್ಪಿನಿಂದ ಪ್ರಮಾದವಾಗಿದೆ ಸರಿ ಪಡಿಸುವಂತೆ ಗೋಳಾಡುವ ಅಭ್ಯರ್ಥಿಗಳು ಸಹ ಇದ್ದಾರೆ.

ಇದೇ ಮಾದರಿಯಲ್ಲಿ ಯುಜಿಸಿಇಟಿ ಕೋರ್ಸ್​ಗಳಿಗೆ ಮೊದಲನೇ ಸುತ್ತಿನಲ್ಲಿ ಹಂಚಿಕೆಯಾಗುವ ಸೀಟುಗಳಿಗೆ ಅಭ್ಯರ್ಥಿಗಳು ಚಾಯ್ಸ್​&1 ಆಯ್ಕೆ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನ ಯುಜಿ ನೀಟ್​ ಆಯ್ಕೆಗಳನ್ನು ದಾಖಲಿಸಿದ್ದರೂ ಪರಿಗಣಿಸುವುದಿಲ್ಲ.
ಆದರೆ, ಯುಜಿಸಿಇಟಿ ಕೋರ್ಸ್​ಗಳ ಮೊದಲನೇ ಸುತ್ತಿನ ಸೀಟು ಹಂಚಿಕೆಯ ನಂತರ ಸೂಕ್ತವಾದ ಚಾಯ್ಸ್​ ಆಯ್ಕೆ ಮಾಡುವುದರಿಂದ ಎರಡನೇ ಸುತ್ತಿನಲ್ಲಿ ಯುಜಿ ನೀಟ್​ (ವೈದ್ಯಕಿಯ&ದಂತವೈದ್ಯಕಿಯ) ಸೀಟು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕಿದೆ.

ಕೆಇಎ ನೀಟ್​ ನೈಜ ಸೀಟು ಹಂಚಿಕೆಯ ಲಿತಾಂಶವನ್ನು ನ.25ರಂದು ಪ್ರಕಟಿಸಿದೆ. ಸಿಇಟಿ ಸೀಟು ಹಂಚಿಕೆ ಲಿತಾಂಶವನ್ನು ಡಿ.2ರಂದು ಪ್ರಕಟಿಸಲಿದೆ. ಭಾನುವಾರ ಸಿಇಟಿ ಅಣಕು ಸೀಟು ಹಂಚಿಕೆಯ ಲಿತಾಂಶವನ್ನು ಬಿಡುಗಡೆ ಮಾಡಿದೆ.

ಅಣಕು ಹಂಚಿಕೆ: ವಿದ್ಯಾರ್ಥಿಗಳು ದಾಖಲಿಸಿರುವ ಇಚ್ಛೆಗಳ ಆಧಾರದ ಮೇಲೆ ನೈಜ ಸೀಟು ಹಂಚಿಕೆ ಮಾಡುವ ಮೊದಲು ಅಣಕು ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ದೊರೆತಿರುವ ಸೀಟುಗಳೇ ಅಂತಿಮವೇನಲ್ಲ. ಇಲ್ಲಿ ಸಿಕ್ಕ ಸೀಟುಗಳೇ ಮುಂದೆ ಕೂಡ ಸಿಗತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇರುವುದಿಲ್ಲ. ಆನಂತರ ಇಚ್ಛೆಗಳ ದಾಖಲೆಗಳ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆ.

ಆಯ್ಕೆ ಬದಲಿಸಲು ಅವಕಾಶ: ಅಣಕು ಫಲಿತಾಂಶ ಪ್ರಕಟವಾದ ನಂತರವೂ ಅಭ್ಯರ್ಥಿಗಳಿಗೆ ಆಪ್ಷನ್​ ಬದಲು ಮಾಡಲು ಅವಕಾಶ ನೀಡಲಾಗುತ್ತದೆ. ಲಿತಾಂಶವನ್ನು ಪರಿಶೀಲಿಸಿದ ನಂತರ ಇಚ್ಛೆ ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಯಾಲಿಸಬಹುದಾಗಿದೆ.
ಅಲ್ಲದೆ, ಮೊದಲನೇ ಸುತ್ತಿಗೆ ಇಚ್ಛೆ ದಾಖಲಿಸದೇ ಇರುವ ಅರ್ಹ ಅಭ್ಯರ್ಥಿಯೂ ಸಹ ಇಷ್ಟವಿದ್ದಲ್ಲಿ ಮತ್ತೆ ಆಯ್ಕೆ ದಾಖಲಿಸಬಹುದಾಗಿದೆ.

  • ಯಾವ ಚಾಯ್ಸ್​ ಏನು ಹೇಳುತ್ತದೆ?
    -&ಚಾಯ್ಸ್​&1 ಸಿಕ್ಕ ಸೀಟು ತೃಪ್ತಿಕರವಾಗಿದೆ ಎಂದು ಖಚಿತ ಪಡಿಸಲು
    &ಚಾಯ್ಸ್​&2 ದೊರೆತ ಸೀಟು ತೃಪ್ತಿಕರವಾಗಿದೆ. ಆದರೆ, ನನಗೆ ಇನ್ನೂ ಉತ್ತಮ ಸೀಟು ಬೇಕಿದೆ. ಆದ್ದರಿಂದ ನಾನು ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ
    &ಚಾಯ್ಸ್​&3 ಮೊದಲ ಸುತ್ತಿನಲ್ಲಿ ದೊರಕಿರುವ ಸೀಟು ತೃಪ್ತಿಕರವಾಗಿಲ್ಲ. ಆದ್ದರಿಂದ ನಾನು ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ.
    &ಚಾಯ್ಸ್​&4 ಮೊದಲ ಸುತ್ತಿನಲ್ಲಿ ತೃಪ್ತಿಕರವಾಗಿಲ್ಲ. ನನಗೆ ದೊರಕಿರುವ ಸೀಟು ಬೇಡ. ಮುಂದಿನ ಸುತ್ತಿನಲ್ಲೂ ಯಾವ ಸೀಟು ತೆಗೆದುಕೊಳ್ಳಲು ಇಷ್ಟವಿಲ್ಲ. ನಾನು ಬೇರೆ ಸಂಸ್ಥೆಯಿಂದ ಸೀಟು ತೆಗೆದುಕೊಳ್ಳುತ್ತೇನೆ.