ಜಿಲ್ಲೆ

ಸಿಇಟಿ ಗೊಂದಲ ತಜ್ಞರ ಸಮಿತಿ ರಚಿಸಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಸಂವಿಧಾನದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ಕೊಡಲಾಗಿದ್ದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ಉಂಟಾಗುವ ಗೊಂದಲ ನಿವಾರಣೆಗೆ ತಜ್ಞರ ಸಮಿತಿ ರಚನೆ ಮಾಡುವಂತೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗಿಸಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಆಸ್ತಿಕರಾಗಿ, ನಾಸ್ತಿಕರಾಗಿ ಬದುಕಲು ಸಂವಿಧಾನದಲ್ಲಿ ಅವಕಾಶವಿದ್ದು ಅವರವರ ಆಚರಣೆಯನ್ನು ಒಪ್ಪಲೇಬೇಕಿದೆ. ಸಿಇಟಿ ಪರೀಕ್ಷಾ ನಿಯಮದಲ್ಲಿ ಪರೀಕ್ಷಾ ಮೇಲ್ಚಿಚಾರಕರು ಕೆಲವು ಕ್ರಮಗಳನ್ನು ಕೈಗೊಂಡಿರುತ್ತಾರೆ. ಹಾಗಾಗಿ, ಇಂತಹುದಕ್ಕೆ ಆಸ್ಪದ ಕೊಡದಂತೆ ಸರ್ಕಾರವು ಗೊಂದಲ ನಿವಾರಣೆ ಮಾಡಿ ಸೂಕ್ತ ಕ್ರಮ ಕೈಗೊಂಡರೆ ಒಳಿತು ಎಂದು ಸಲಹೆ ನೀಡಿದರು.