ಜಿಲ್ಲೆ

ವಿದ್ಯುತ್ ಸರಬರಾಜು ವ್ಯವಸ್ಥೆ ಮೇಲ್ದರ್ಜೆಗೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ವಿದ್ಯುತ್ ಸರಬರಾಜು ವ್ಯವಸ್ಥೆ ವಿಚಾರದಲ್ಲಿ ತುಂಬಾ ಹಿಂದೆ ಇರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ವಿದ್ಯುತ್ ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸಗಳು ಆಗುತ್ತಿದೆ. ಇದಕ್ಕಾಗಿ ಸರ್ಕಾರ ಬರೋಬ್ಬರಿ 226 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. 2026ರ ಜನವರಿ ಅಥವಾ ಫೆಬ್ರವರಿ ವೇಳೆಗೆ ಎಲ್ಲಾ ಕಾಮಗಾರಿಗಳು ಮುಗಿಯುವ ನಿರೀಕ್ಷೆ ಇದ್ದು, ನಂತರ ಜಿಲ್ಲೆಯಲ್ಲಿ ವಿದ್ಯುತ್ ಸಂಬAಧಿ ಸಮಸ್ಯೆಗಳು ಬಹುತೇಕ ದೂರವಾಗುವ ನಿರೀಕ್ಷೆಯಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಲೆನಾಡಿನ ಕೊಡಗಿನಲ್ಲಿ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೆಸ್ಕ್ಗೆ ದೊಡ್ಡ ಸವಾಲು. ಪ್ರಸರಣ ವ್ಯವಸ್ಥೆಯೂ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಕೆಲವೊಂದು ಪ್ರದೇಶ ಹೊರತುಪಡಿಸಿದರೆ ಈಗಲೂ ಹಳೆಯ ಕಾಲದ ತಾಂತ್ರಿಕತೆಯನ್ನೇ ಬಳಸಲಾಗುತ್ತಿದೆ. ಜಿಲ್ಲೆಯ 5 ತಾಲೂಕುಗಳಲ್ಲೂ ವಿದ್ಯುತ್ ಲೋಡ್ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಆದರೂ ಪೂರೈಕೆ ವ್ಯವಸ್ಥೆ ಇನ್ನೂ ಮೇಲ್ದರ್ಜೆಗೆ ಏರದಿರುವುದರಿಂದ ಗ್ರಾಹಕರು ವಿದ್ಯುತ್ ಸಂಬAಧಿ ಇನ್ನಿತರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಒಂದೇ ವಿದ್ಯುತ್ ಮಾರ್ಗ ಇರುವಲ್ಲಿ ಇಂಥÀ ಸಮಸ್ಯೆ ಆಗಾಗ್ಗೆ ಎದುರಾಗುತ್ತಿರುತ್ತದೆ.

ಜೂನ್‌ನಿಂದ ಅಕ್ಟೋಬರ್ ತನಕ ಮಳೆಯ ಹೊಡೆತ ವಿದ್ಯುತ್ ಸರಬರಾಜಿನ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ. ಸಕಾಲದಲ್ಲಿ ಮಳೆ ಬಾರದಿದ್ದರೆ ನವೆಂಬರ್‌ನಿAದ ಮೇ ವರೆಗೆ ಕಾಫಿ ತೋಟಗಳಿಗೆ ನೀರು ಹಾಯಿಸಲು ಭಾರಿ ಪ್ರಮಾಣದಲ್ಲಿ ವಿದ್ಯುತ್ ಬೇಕಾಗುತ್ತದೆ. ಈ ವೇಳೆ ಗುಣಮಟ್ಟದ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ಪರದಾಡಬೇಕಾದ ಸ್ಥಿತಿ ಕೊಡಗಿನಲ್ಲಿ ಇದೆ. ಈಗಿರುವ ಪ್ರಸರಣಾ ವ್ಯವಸ್ಥೆ ಸುಧಾರಣೆ ಆಗದ ಹೊರತೂ ಈ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಹಾಗಾಗಿ ಜಿಲ್ಲೆಯ ಶಾಸಕರು ಕೊಡಗಿನಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮೇಲ್ಮಟ್ಟಕ್ಕೆ ಏರಿಸಲು ಪಣತೊಟ್ಟಿದ್ದಾರೆ.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಕಾಳಜಿಯ ಪರಿಣಾಮದಿಂದ ಕೊಡಗಿನ ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಸೆಸ್ಕ್ ರೂಪಿಸಿದ ಸಮಗ್ರ ಯೋಜನೆಗೆ ಕೊಡಗು ಮೂಲದವರಾದ ಇಂಧನ ಸಚಿವ ಕೆ.ಜೆ. ಜಾರ್ಜ್ ಅನುಮೋದನೆ ನೀಡಿದ್ದು, 226 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 536 ಕಿ.ಮೀ. ವಿದ್ಯುತ್ ಮಾರ್ಗ ದುರಸ್ತಿ ಒಳಗೊಂಡAತೆ ಹಲವು ಕಾರ್ಯಗಳು ಈ ಯೋಜನೆ ಅಡಿಯಲ್ಲಿ ಸೇರಿಕೊಂಡಿದ್ದು, ಈಗಾಗಲೇ ಕೆಲಸ ಶುರುವಾಗಿದೆ.

ಮಲೆನಾಡಿನ ಕೊಡಗಿನಲ್ಲಿ ಕಾಫಿ ಎಸ್ಟೇಟ್, ಕಾಡು, ಗುಡ್ಡಗಾಡು ಪ್ರದೇಶಗಳ ಮೂಲಕ ವಿದ್ಯುತ್ ಜಾಲ ಹಾದು ಹೋಗಿದೆ. ಹಾಗಾಗಿ ಇಂಥ ಪ್ರದೇಶದಲ್ಲಿ ವಿದ್ಯುತ್ ಮಾರ್ಗದ ನಿರ್ವಹಣೆ ಸೆಸ್ಕ್ ಪಾಲಿಗೆ ದೊಡ್ಡ ಸವಾಲಾಗಿದೆ. ಹಾಗಾಗಿ ಈ ಸವಾಲನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಣೆಯ ರೂಪುರೇಷೆ ಸಿದ್ಧಪಡಿಸಲಾಗಿದೆ. ಇವುಗಳ ಆಧಾರದಲ್ಲೇ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 11 ಕೆವಿಯ 84 ಫೀಡರ್‌ಗಳಿದ್ದು ಈ ಪೈಕಿ ಸುಮಾರು 20 ಫೀಡರ್‌ಗಳಲ್ಲಿ ಸುಧಾರಣೆ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು. ಕೆಲವು ಕಡೆ ಶೇ. 20ಕ್ಕಿಂತಲೂ ಅಧಿಕ ವಿದ್ಯುತ್ ಸೋರಿಕೆ ಆಗುತ್ತಿದೆ. ಕೆಲವು ಫೀಡರ್‌ಗಳಲ್ಲಿ ವೋಲ್ಟೇಜ್ ರೆಗ್ಯುಲೇಷನ್‌ನ ಅಗತ್ಯವಿದೆ. ಇವುಗಳಿಗೆ ಪರಿಹಾರ ಕಂಡುಕೊAಡರೆ ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ನಿರಂತರವಾಗಿ ಸರಬರಾಜು ಮಾಡಬಹುದಾಗಿದೆ ಎನ್ನುವ ಸಲಹೆಗಳ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಯೋಜನಾಬದ್ಧವಾಗಿ ನಡೆಲಾಗುತ್ತಿದೆ.

ಸೆಸ್ಕ್ ಕೊಡಗಿನಲ್ಲಿ ಐದು ಉಪವಿಭಾಗಗಳು ಮತ್ತು 23 ಶಾಖಾ ಕಚೇರಿಗಳನ್ನು ಹೊಂದಿದೆ. 92 ಸ್ಥಳಗಳನ್ನು ಒಳಗೊಂಡು 11 ಕೆವಿಯ 84 ಮಾರ್ಗಗಳ ಜತೆಗೆ 4,577 ಕಿ.ಮೀ. ಎಚ್‌ಟಿ ಮಾರ್ಗಗಳು, 7,331 ಕಿ.ಮೀ. ಎಲ್‌ಟಿ ಮಾರ್ಗಗಳು ಹಾಗೂ 7,952 ಟ್ರಾನ್ಸ್ಫಾರ್ಮರ್‌ಗಳನ್ನು ಹೊಂದಿದೆ. 2,29,219 ಗ್ರಾಹಕರಿಗೆ ಸೇವೆ ಸಲ್ಲಿಸಲಾಗುತ್ತಿದೆ. ಸರ್ಕಾರ ಬಿಡುಗಡೆ ಮಾಡಿರುವ 226 ಕೋಟಿ ರೂ. ಪೈಕಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 120 ಕೋಟಿ ರೂ. ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ 106 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಸರ್ಕಾರದ ಅನುದಾನವನ್ನು ಮಡಿಕೇರಿ ಉಪವಿಭಾಗಕ್ಕೆ 49 ಕೋಟಿ ರೂ., ಕುಶಾಲನಗರ ಮತ್ತು ಸೋಮವಾರಪೇಟೆ ಉಪವಿಭಾಗಗಳಿಗೆ ತಲಾ 40.3 ಕೋಟಿ ರೂ., ಗೋಣಿಕೊಪ್ಪಲು ಉಪವಿಭಾಗಕ್ಕೆ 55.5 ಕೋಟಿ ರೂ. ಹಾಗೂ ವಿರಾಜಪೇಟೆ ಉಪವಿಭಾಗಕ್ಕೆ 41.4 ಕೋಟಿ ರೂ. ಕೊಡಲಾಗಿದೆ. ಈ ಅನುದಾನ ಬಳಸಿಕೊಂಡು ಈಗಾಗಲೇ ಕೆಲಸಗಳು ನಡೆಯುತ್ತಿದೆ. ಮೂರು ಸಂಸ್ಥೆಗಳಿಗೆ ಕಾಮಗಾರಿಯ ಹೊಣೆ ನೀಡಲಾಗಿದ್ದು, ಯಾವುದೇ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡು ಸೆಸ್ಕ್ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುತ್ತಾರೆ ಸೆಸ್ಕ್ ಅಧಿಕಾರಿಗಳು. ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿ ವೇಳೆಗೆ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈಗ ನಡೆಯುತ್ತಿರುವ ಈ ಕೆಲಸಗಳ ಮೂಲಕ ಕೊಡಗಿನಲ್ಲಿ ಬಹಳ ಹಿಂದಿನಿAದಲೂ ನಿರ್ಲಕ್ಷಿಸಿಕೊಂಡು ಬಂದಿದ್ದ ವಿದ್ಯುತ್ ಮೂಲ ಸೌಕರ್ಯ ವ್ಯವಸ್ಥೆಗೆ ಪರಿಹಾರ ಸಿಗುವ ಆಶಾಭಾವನೆ ಇಟ್ಟುಕೊಳ್ಳಲಾಗಿದೆ. ಹೆಚ್ಚು ಮಳೆ ಬೀಳುವ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಮತ್ತು ಮಡಿಕೇರಿ ತಾಲೂಕಿನ ಭಾಗಮಂಡಲದAಥ ಪ್ರದೇಶಗಳು ವಿದ್ಯುತ್ ಪೂರೈಕೆಗಾಗಿ ಸುಮಾರು 100 ಕಿ.ಮೀ. ಉದ್ದದ ಏಕಮಾರ್ಗ ವ್ಯವಸ್ಥೆ ಅವಲಂಭಿಸಿವೆ. ಇಂಥ ಪ್ರದೇಶಗಳಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ.

ಅಮ್ಮತ್ತಿ, ವಿರಾಜಪೇಟೆ, ತಿತಿಮತಿ, ಹಾತೂರು, ಭಾಗಮಂಡಲ ಸೇರಿದಂತೆ ಬಹಳಷ್ಟು ಪ್ರದೇಶಗಳಲ್ಲಿ ವಿದ್ಯುತ್ ವೋಲ್ವೇಜ್ ಏರಿಳಿತದ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಈ ಯೋಜನೆ ಭಾಗವಾಗಿ ಕವರ್ ಕಂಡಕ್ಟರ್‌ಗಳು ಮತ್ತು ಟ್ರಾನ್ಸ್ಫಾರ್ಮಗಳು ಸೇರಿದಂತೆ ಅಗತ್ಯ ತಾಂತ್ರಿಕ ಅಗತ್ಯತೆಗಳನ್ನು ಪೂರೈಸುವ ಗುರಿ ಈ ಯೋಜನೆ ಒಳಗೊಂಡಿದೆ. ಹಾಗಾಗಿ ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ತಜ್ಞರು.

ಜಿಲ್ಲೆಯ ಕಾಫಿ ಬೆಳೆಗಾರರ ಸಂಘಟನೆಗಳು, ರೈತ ಸಂಘಟನೆಗಳು, ಸಾಮಾನ್ಯ ವಿದ್ಯುತ್ ಬಳಕೆದಾರರು ವಿದ್ಯುತ್ ಪ್ರಸರಣಾ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಕಾಲ ಕಾಲಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಂಬAಧಿಸಿದವರ ಗಮನ ಸೆಳೆಯುತ್ತಾ ಬಂದಿದ್ದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನವನ್ನೂ ತರಲಾಗಿತ್ತು. ಇದೆಲ್ಲದರ ಪರಿಣಾಮ ಎಂಬAತೆ ಈಗ 226 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದೆ. ಇದರ ಜತೆಗೆ ಆಡಳಿತಾತ್ಮಕವಾಗಿಯೂ ಇಲಾಖೆಯಲ್ಲಿ ಬದಲಾವಣೆಯ ಅವಶ್ಯಕತೆ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ದೂರದ ಚಾಮರಾಜನಗರ, ಕೊಳ್ಳೇಗಾಲದ ವೃತ್ತದೊಡನೆ ಸೇರಿಸÀಲಾಗಿದೆ. ಇದರಿಂದಾಗಿ ವ್ಯವಸ್ಥೆಯ ನಿಯಂತ್ರಣ ಕಷ್ಟ ಎನ್ನುವ ಅಭಿಪ್ರಾಯ ಇದೆ. ತ್ವರಿತ ಸ್ಪಂದನೆಯೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೊಡಗಿಗೆ ಪ್ರತ್ಯೇಕ ವೃತ್ತದ ಬೇಡಿಕೆ ಇಡುತ್ತಾ ಬರಲಾಗುತ್ತಿದೆ.

ಡಿಸೆಂಬರ್‌ನಿAದ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈಗ ಮಳೆಯ ಕಾರಣದಿಂದ ಸ್ವಲ್ಪ ನಿಧಾನಗತಿಯಲ್ಲಿ ಕೆಲಸಗಳು ಆಗುತ್ತಿದೆ. ಶೇ. 30ರಷ್ಟು ಕಾಮಗಾರಿ ಮುಗಿದಿದೆ. 10-15 ತಂಡಗಳಲ್ಲಿ ಕೆಲಸ ಮಾಡುವುದರಿಂದ ಈ ಡಿಸೆಂಬರ್ ಒಳಗೆ ಮುಗಿಯುವ ಸಾಧ್ಯತೆ ಇದೆ. ಯೋಜನೆಯ ಕಾಮಗಾರಿ ಮುಗಿದ ನಂತರ ಜಿಲ್ಲೆಯ ವಿದ್ಯುತ್ ಸಮಸ್ಯೆಗಳು ಬಹುತೇಕ ಪರಿಹಾರ ಆಗಲಿದೆ. ನಿರಂತರ ವಿದ್ಯುತ್ ಪೂರೈಕೆ ಇರಲಿದೆ.

ಎಂ. ರಾಮಚಂದ್ರ, ಕಾರ್ಯಪಾಲಕ ಅಭಿಯಂತರ, ಸೆಸ್ಕ್, ಮಡಿಕೇರಿ

ಬಹುಕಾಲದ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದೆ. ನಮ್ಮ ಬೇಡಿಕೆಗಳಿಗೆ ಮನ್ನಣೆ ಕೊಟ್ಟು ಕೊಡಗಿನವರೇ ಆದ ಕೆ.ಜೆ. ಜಾರ್ಜ್ 226 ಕೋಟಿ ರೂ. ಮಂಜೂರು ಮಾಡಿ ಕೂಡಲೇ ಹಣ ಬಿಡುಗಡೆ ಮಾಡಿದ್ದಾರೆ. ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಈ ಯೋಜನೆ ಪೂರಕವಾಗಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ