ಜಿಲ್ಲೆ

ಮೇ ಮಳೆಗೆ 1400 ವಿದ್ಯುತ್ ಕಂಬ ನಷ್ಟ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕಳೆದ ತಿಂಗಳು ತೀವ್ರವಾದ ಮಳೆ-ಗಾಳಿಯಿಂದಾಗಿ ಕೊಡಗಿನಲ್ಲಿ ಈತನಕ ಒಟ್ಟು 1,442 ವಿದ್ಯುತ್ ಕಂಬ್ಖು, 11 ವಿದ್ಯುತ್ ಪರಿವರ್ತಕಗಳು ಹಾಗೂ 13.105 ಕಿ.ಮೀ. ವಿದ್ಯುತ್ ಲೈನ್ ಹಾನಿಗೊಳಗಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ 1091 ಕಂಬಗಳನ್ನು ಹಾಗೂ 9 ಪರಿವರ್ತಕಗಳನ್ನು ದುರಸ್ತಿಗೊಳಿಸಿ ಬದಲಾಯಿಸಲಾಗಿದೆ.

ದೈನಂದಿನ ಚಟುವಟಿಕೆಯಲ್ಲಿ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಳೆ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ವಿದ್ಯುತ್ ಕಂಬಗಳ ಮುರಿಯುವಿಕೆ ಮುಂದುವರಿದಿದೆ. ವಿದ್ಯುತ್ ಜಾಲದ ದುರಸ್ತಿ ಕಾರ್ಯ ಚುರುಕಗೊಳಿಸಲು, ವಿದ್ಯುತ್ ಜಾಲ ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಿಬ್ಬಂದಿ, ಇತರೆ ವಿಭಾಗಗಳಿಂದ 52 ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ 75 ಸಿಬ್ಬಂದಿ ಕಾರ್ಯೊನ್ಮುಖರಾಗಿದ್ದಾರೆ.

ಇವರ ಜತೆ 124 ವಿದ್ಯುತ್ ಗುತ್ತಿಗೆದಾರ ಸಿಬ್ಬಂದಿ ವಿವಿಧ ಸಲಕರಣೆಗಳೊಂದಿಗೆ ನಿರಂತರವಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬದ ಬದಲಾವಣೆ ಕಾಮಗಾರಿ ಹಾಗೂ ಮಾರ್ಗದ ವಿಫಲತೆಯನ್ನು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಮಳೆಗಾಳಿಯಿಂದ ಪದೇ ಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿAದ ವಿದ್ಯುತ್ ವ್ಯತ್ಯಯವಾಗುತ್ತಿದ್ದು. ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.

ಜಿಲ್ಲೆಯಾದ್ಯಂತ ಮಳೆಗಾಳಿಯಿಂದಾಗಿ ಸೆಸ್ಕ್ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್ ಜಾಲದ ಮರು ಸ್ಥಾಪನೆಯಲ್ಲಿ ನಿರತರಾಗಿದ್ದಾರೆ. ಶಾಖಾಧಿಕಾರಿಗಳು ಬ್ರೇಕ್‌ಡೌನ್ ನಿರ್ವಹಣೆ ಕಾಮಗಾರಿಗಳಲ್ಲಿ ನಿರತರಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರುವುದಿಲ್ಲ. ಆದ್ದರಿಂದ ಗ್ರಾಹಕರ ದೂರುಗಳನ್ನು ದಾಖಲಿಸಿ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ಟೋ ಫ್ರೀ ಸಂಖ್ಯೆ 1800-599-0061 ನೀಡಲಾಗಿದ್ದು, ವಿದ್ಯುತ್ ಜಾಲದ ಯಾವುದೇ ಸಮಸ್ಯೆ ಇದ್ದಲ್ಲಿ ಗ್ರಾಹಕರು ಈ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.