ಮಡಿಕೇರಿ:
ಮಳೆಗಾಲದ ಅವಧಿಯಲ್ಲಿ ಕೊಡಗಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುವುದು ಸಾಮಾನ್ಯ. ಈ ಪರಿಸ್ಥಿತಿ ಈಗಾಗಲೇ ಜನಸಾಮಾನ್ಯರ ಅನುಭವಕ್ಕೆ ಬರುತ್ತಿದೆ. ಮೇ ತಿಂಗಳಿನಲ್ಲೇ ಮಳೆಯ ಅಬ್ಬರ ಶುರುವಾಗಿದ್ದು, ಮುಂಗಾರಿನ ವಾತಾವರಣ ಕಾಣಿಸಿಕೊಂಡಿರುವುದರಿAದ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದೆ. ಈ ಬೆನ್ನಲ್ಲೇ ವಿದ್ಯುತ್ ಸಂಬAಧಿ ಸಮಸ್ಯೆಗಳೂ ಉದ್ಭವಿಸಿದೆ. ಕೊಡಗಿನ ಬಹುತೇಕ ಕಡೆಗಳಲ್ಲಿ ಕಳೆದ 2 ದಿನಗಳಿಂದ ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲ. ಗ್ರಾಮೀಣ ಪ್ರದೇಶಗಳಂತೂ ಕಗ್ಗತ್ತಲಿನಲ್ಲಿ ಮುಳುಗಿದೆ.
ಪ್ರತಿವರ್ಷವೂ ಮುಂಗಾರು ಆರಂಭಕ್ಕೂ ಮೊದಲು ಸೆಸ್ಕ್ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಕಳೆದ ವರ್ಷ ಮಳೆಗಾಲದ ಸಂದರ್ಭ ಜಿಲ್ಲೆಯಲ್ಲಿ ಸೆಸ್ಕ್ ಕಾರ್ಯನಿರ್ವಹಣೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈ ವರ್ಷ ಮಳೆಗಾಲದ ಸಿದ್ಧತೆಯಲ್ಲಿ ಇರುವಾಗಲೇ ಮಳೆಯ ಆರ್ಭಟ ಶುರುವಾಗಿರುವುದರಿಂದ ಅಲ್ಲಲ್ಲಿ ಸಮಸ್ಯೆಗಳು ಆಗುತ್ತಿದೆ. ಬಹುತೇಕ ಕಡೆಗಳಲ್ಲಿ ಮರ ಮತ್ತು ಮರದ ರೆಂಬೆಗಳು ಮುರಿದು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿ ಸಂಪರ್ಕ ಕಡಿತವಾಗಿದೆ.
ಮಳೆ ಶುರುವಾಗುತ್ತಿದ್ದಂತೆಯೇ ಮರಗಳು ಉರುಳುವುದು, ಗಾಳಿಗೆ ರೆಂಬೆಗಳು ತುಂಡಾಗಿ ಬೀಳುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಮೇ ಆರಂಭದಲ್ಲೇ ಇಂಥ ಮರ ಮತ್ತು ಮರದ ರೆಂಬೆಗಳನ್ನು ಗುರುತಿಸಿ ತೆರವು ಮಾಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರಲಿಲ್ಲ. ಜತೆಗೆ ಸಿಬ್ಬಂದಿ ಸಮಸ್ಯೆಯೂ ಇದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಕಳೆದ ವಾರ ಮಡಿಕೇರಿಗೆ ಆಗಮಿಸಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು.
ಅವಧಿಗೂ ಮೊದಲೇ ಮಳೆ ಆರಂಭ ಆಗಿರುವುದರಿಂದ ಸೆಸ್ಕ್ನಲ್ಲೂ ಒಂದಿಷ್ಟು ಗೊಂದಲಗಳು ಆಗಿದೆ. ಆದರೂ ಸಿಬ್ಬಂದಿ ಚೇತರಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದು, ವಿದ್ಯುತ್ ಮರುಸಂಪರ್ಕದಲ್ಲಿ ನಿರತರಾಗಿದ್ದಾರೆ. ಈ ಎಲ್ಲಾ ವಿಷಯಗಳಿಗೆ ಸಂಬAಧಿಸಿದAತೆ ಸೆಸ್ಕ್ ಮತ್ತು ಸಾರ್ವಜನಿಕರ ಜವಾಬ್ದಾರಿ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಮಳೆಗಾಲ ಪ್ರಾರಂಭವಾದರೆ ಸಿದ್ದಾಪುರ ಸುತ್ತ ಮುತ್ತ ಗ್ರಾಮಗಳಲ್ಲಿ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ಸೆಸ್ಕ್ ಸಿಬ್ಬಂದಿ ಮಳೆಯಲ್ಲಿ ಹಗಲು-ರಾತ್ರಿ ಶ್ರಮಪಟ್ಟು ವಿದ್ಯುತ್ ನೀಡಲು ಶ್ರಮಿಸುತ್ತಾರೆ. ಆದರೆ ಈ ಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಮಳೆಗಾಲದಲ್ಲಿ ಹೆಚ್ಚು ಸಿಬ್ಬಂದಿ ನೇಮಕ ಮಾಡಬೇಕಾಗಿದೆ.
ಉಮೇಶ್, ಮಾಲ್ದಾರೆ ನಿವಾಸಿ
ಈ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರ 66 ಕೆವಿ ವಿದ್ಯುತ್ ಸ್ಥಾವರ ನಿರ್ಮಿಸಬೇಕು. 66ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಪಾಲಿಬೆಟ್ಟ ರಸ್ತೆ ಸಮೀಪ ಟಾಟಾ ಸಂಸ್ಥೆ 2 ಎಕರೆ ಜಾಗವನ್ನು ಇಲಾಖೆಗೆ ನೀಡಿದೆ. ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಶ್ರೀಘ್ರ ಕಾಮಗಾರಿ ನಡೆಯಬೇಕಿದೆ.
ಹರಿಪ್ರಸಾದ್ ಮೂಡಗದ್ದೆ, ಚೆನ್ನಯ್ಯನ ಕೋಟೆ ಗ್ರಾಮ
ಮಳೆಗಾಲ ಪ್ರಾರಂಭದಲ್ಲೇ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ, ಸಾರ್ವಜನಿಕರು ಸಹ ತಮ್ಮ ತೋಟಗಳಲ್ಲಿ ಹೋಗಿರುವ ವಿದ್ಯುತ್ ಮಾರ್ಗದ ಕೆಳಗೆ ಇರುವ ಹಾಗೂ ವಿದ್ಯುತ್ ತಂತಿಗೆ ತಾಗಿರುವ ರೆಂಬೆಗಳನ್ನು ತೆರವುಗೊಳಿಸಬೇಕು, ಇಲಾಖೆಯವರೇ ಬಂದು ಮಾಡುವಾಗ ಅವರೊಂದಿಗೆ ಕೈ ಜೋಡಿಸಬೇಕು, ಹಾಗಿದ್ದಾಗ ಮಾತ್ರ ಸರಿಯಾಗಿ ವಿದ್ಯುತ್ ಕೊಡಲು ಇಲಾಖೆಗೆ ಸಾಧ್ಯವಾಗುವುದು.
ಗೀತಾ, ವ್ಯವಸ್ಥಾಪಕಿ, ಮೈಸ್ ಕಂಪ್ಯೂಟರ್ ಶಿಕ್ಷಣ ಕೇಂದ್ರ, ಶನಿವಾರಸಂತೆ
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಸೆಸ್ಕ್ನೊಂದಿಗೆ ಒಂದು ತಂಡ ರಚಿಸಿ ವಿದ್ಯುತ್ ಅಡಚಣೆಗೆ ಮೂಲ ಕಾರಣವಾಗಿರುವ ಮರದ ಕೊಂಬೆಗಳನ್ನು ಕಟಾವು ಮಾಡುವುದು, ದುರಸ್ತಿಯಲ್ಲಿರುವ ಕೇಬಲ್ ಬದಲಾವಣೆ, ಟ್ರಾನ್ಸ್ಫಾರ್ಮರ್‌ಗಳ ಮೇಲೆ ನಿಗಾ ಇರಿಸುವುದರ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯ ಜನತೆಗೆ ದೂರು ನೀಡಲು ಗ್ರಾಮಮಟ್ಟದಲ್ಲಿ ಒಂದು ಸಹಾಯವಾಣಿ ಆರಂಭಿಸಬೇಕು.
ಕೆ.ಜಿ. ಮನು, ಸಾಮಾಜಿಕ ಹೋರಾಟಗಾರ, ಕುಶಾಲನಗರ
ಮಳೆಗಾಲ ಬಂತೆAದರೆ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಇದಕ್ಕೆ ಸಂಬAಧಿಸಿದAತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಳೆ ಬಂದರೆ ತಂತಿಗಳು ಬಿದ್ದು ಅನಾಹುತ ಸಂಭವಿಸುತ್ತವೆ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮಳೆ ಸಮಯದಲ್ಲಿ ವಿದ್ಯುತ್ ಇಲಾಖೆಯವರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಅವರನ್ನು ದೂರುವುದು ಬಿಟ್ಟು ಅವರಿಗೆ ಸಹಕಾರ ನೀಡಬೇಕು.
ಎಂ. ಕೃಷ್ಣ, ಅಧ್ಯಕ್ಷ, ಕರ್ನಾಟಕ ಕಾವಲು ಪಡೆ, ಕೊಡಗು
ಮಳೆಗಾಲ ಪ್ರಾರಂಭಕ್ಕೆ ಮೊದಲು ವಿದ್ಯುತ್ ಮಾರ್ಗದಲ್ಲಿ ಮರದ ರೆಂಬೆಗಳನ್ನು ತೆಗೆಯಬೇಕು. ಕೆಲ ಗ್ರಾಮಗಳಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಮಾಡಿಲ್ಲ. ಜೋರು ಮಳೆಯಾದರೆ ರಾತ್ರಿ - ಹಗಲು ಕರೆಂಟ್ ತೆಗೆಯುತ್ತಾರೆ. ಅಂದರೆ ವಿದ್ಯುತ್ ಮಾರ್ಗಗಳು ಕಳಪೆಯಾಗಿವೆ ಎಂದೇ ಅರ್ಥ. ಸೆಸ್ಕ್ ನೂತನ ತಂತ್ರಜ್ಞಾನದತ್ತ ಮುಖ ಮಾಡಲೇಬೇಕು.
ಎಚ್.ಎ. ನಾಗರಾಜ್, ಸಮಾಜ ಸೇವಕ, ಸೋಮವಾರಪೇಟೆ.
ಮಳೆ ಬಿದ್ದಕೂಡಲೇ ಮಣ್ಣು ಸಡಿಲವಾಗಿ ಮರಗಳು ಬುಡಸಹಿತ ಬೀಳಬಹುದು. ಜೋರಾದ ಗಾಳಿಗೆ ಮರದ ಕೊಂಬೆಗಳು ಮುರಿದು ಬೀಳುವುದು ಸಹಜ. ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರೇ ಗಮನಿಸಿ ವಿದ್ಯುತ್ ತಂತಿಗಳು ಹಾದುಹೋಗುವ ಸ್ಥಳಗಳಲ್ಲಿ ಮರದ ಕೊಂಬೆಗಳು ಅಡಚಣೆಯಾಗುವಂತಿದ್ದರೆ ಸೆಸ್ಕ್ಗೆ ಮಾಹಿತಿ ನೀಡಿ ಮುಂದಾಗುವ ತೊಂದರೆಗಳನ್ನು ತಪ್ಪಿಸಬಹುದು. ಇಲಾಖೆ ಕೂಡ ಸ್ವಯಂಪ್ರೇರಿತವಾಗಿ ಇಂಥ ಕಾರ್ಯ ಮಾಡಬೇಕು.
ಕಾಳೇರಮ್ಮನ ರಶಿಅಶೋಕ, ಅವಂದೂರು ಗ್ರಾಮ
ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತಲೆದೋರುವುದು ಕೊಡಗಿನಲ್ಲಿ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ತೋಟದ ಒಳಗಿನಿಂದ ವಿದ್ಯುತ್ ಲೈನ್ ಹೋಗಿರುವುದು. ಅದರಿಂದ ಮಳೆಗಾಲದ ಆರಂಭಕ್ಕೂ ಮೊದಲು ತೋಟದ ಮಾಲೀಕರು ಕರೆಂಟ್ ಕಂಬ ಅಥವಾ ಲೈನ್‌ಗೆ ತೊಂದರೆ ಉಂಟುಮಾಡುವ ಮರಗಳನ್ನು ಹಾಗೂ ಮರದ ಕೊಂಬೆಗಳನ್ನು ತೆರವು ಮಾಡಬೇಕು. ಸೆಸ್ಕ್ನವರು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಒಂದಷ್ಟು ಕಂಬಗಳನ್ನು ಸಿದ್ಧಪಡಿಸಿ ಇಟ್ಟಿರಬೇಕು.
ಬಿ.ಜೆ. ಶರಣ್, ವಿರಾಜಪೇಟೆ
ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಂದರ್ಭ ಸೆಸ್ಕ್ ವತಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಕ್ಕೆ ಹಾನಿಯಾಗುವುದು ಕಂಡುಬರುವುದರಿAದ ಆಯಾಯ ಸಂದರ್ಭದಲ್ಲಿಯೇ ಇವುಗಳ ಬದಲಾವಣೆಗೆ ಕ್ರಮವಹಿಸಲಾಗುತ್ತದೆ. ವಿದ್ಯುತ್ ಅವಘಡಗಳನ್ನು ತಪ್ಪಿಸಿ, ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೆಚ್ಚಿನ ಲೈನ್‌ಮನ್ ಹಾಗೂ ಗ್ಯಾಂಗ್‌ಮನ್‌ಗಳನ್ನು ನಿಯೋಜಿಸಲಾಗಿದೆ. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದAತೆ ಮುನ್ನೆಚ್ಚರ ವಹಿಸಲಾಗಿದೆ. ಟೋಲ್ ಫ್ರೀ ಸಂಖ್ಯೆಯನ್ನು ಸಹ ನೀಡಲಾಗುತ್ತಿದ್ದು, ಸಾರ್ವಜನಿಕರು ವಿದ್ಯುತ್ ಅಡಚಣೆ ಸಂಬAಧಿಸಿದAತೆ ಮಾಹಿತಿ ನೀಡಬಹುದಾಗಿದೆ.
ರಮೇಶ್ ಬಂಡಿಸಿದ್ದೇಗೌಡ, ಅಧ್ಯಕ್ಷ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ