ಕೆ.ಆರ್.ಪೇಟೆ: ಪಟ್ಟಣದ ಹೊಸಹೊಳಲು ರಸ್ತೆಯಲ್ಲಿನ ಸೆಸ್ಕ್ ವಿಭಾಗೀಯ ಕಚೇರಿಯ ಆವರಣದಲ್ಲಿ ಆ.23 ರಂದು ಎರಡನೇ ತ್ರೈಮಾಸಿಕ ಜನಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಇಇ ವಿನುತಾ ತಿಳಿಸಿದ್ದಾರೆ.
ವಿಭಾಗದ ಎರಡು ಉಪವಿಭಾಗ ವ್ಯಾಪ್ತಿಯ ಗ್ರಾಹಕರು ತಮ್ಮ ಕುಂದು-ಕೊರತೆಗಳನ್ನು ಸಭೆಯಲ್ಲಿ ನಿವಾರಿಸಿಕೊಳ್ಳಬಹುದು. ಸಭೆಯ ಅಧ್ಯಕ್ಷತೆ ಮಂಡ್ಯ ಅಧೀಕ್ಷಕ ಇಂಜಿನಿಯರ್ ವಹಿಸಲಿದ್ದು, ಇಇ, ಎಇಇ, ಜೆಇ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.