ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಅಮೋವರ್ಷ ಐಎಎಸ್​ ಅಕಾಡೆಮಿ ಸಂಸ್ಥಾಪಕ ಡಾ.ರಾಮಣ್ಣಗೌಡ.ಜಿ.ಪಿ, ಪ್ರಾಂಶುಪಾಲ ತಿಮ್ಮಹನುಮಯ್ಯ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಡಾ.ಆರ್​.ರತ್ನಮ್ಮ, ಪೊ.ಎಸ್​.ತಾರಾಮಣಿ, ಪೊ.ಸಿ.ಜಿ.ರಮೇಶ್​, ಪೊ.ಸಿದ್ದೇಶ್ವರಪ್ಪ, ಪೊ.ಡಿ.ಸಾಯಿಪ್ರಸಾದ್​, ಡಾ.ಎಸ್​.ಮಂಜುನಾಥ್​, ಪೊ.ನಿರ್ಮಲಾ ಎಂ.ಸಂಗಮ, ಪೊ.ರವಿ.ಆರ್​.ಎಸ್​. ಸಿಬ್ಬಂದಿ ನರಸಿಂಹಮೂರ್ತಿ.ಬಿ.ಎನ್​, ಪ್ರಾಂಶುಪಾಲೆ ಜಯಶ್ರೀ ಇದ್ದರು. 
ಜಿಲ್ಲೆ

ಜ್ಞಾನಕ್ಕಿಂತ ಸರ್ಟಿಫಿಕೇಟ್​ಗೆ ಒಲವು

ತ್ಯಾಮಗೊಂಡ್ಲು : ಪ್ರಸ್ತುತ ವಿದ್ಯಾರ್ಥಿಗಳಿಗೆ ಜ್ಞಾನಕ್ಕಿಂತ ಪದವಿ ಪ್ರಮಾಣಪತ್ರದ ಬಗ್ಗೆ ಒಲವು ಹೆಚ್ಚಾಗಿದೆ. ಸರ್ಟಿಫಿಕೇಟ್​ ಮೋಹದಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ ಎಂದು ಬೆಂಗಳೂರಿನ ಅಮೋವರ್ಷ ಐಎಎಸ್​ ಅಕಾಡೆಮಿ ಸಂಸ್ಥಾಪಕ ಡಾ.ಜಿ.ಪಿ.ರಾಮಣ್ಣಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕಾಲೇಜಿನ ಸಾಂಸತಿಕ, ಕ್ರೀಡಾ, ಎನ್​ಎಸ್​ಎಸ್​, ರೆಡ್​ಕ್ರಾಸ್​, ರೋವರ್ಸ್​ ಮತ್ತು ರೇಂಜರ್ಸ್​, ಐಕ್ಯೂಎಸಿ , ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಗುರಿಯಿದ್ದವರನ್ನು ಜಗತ್ತು ಗುರುತಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಎಂದಿಗೂ ಉನ್ನತ ಮಟ್ಟದಲ್ಲಿರುತ್ತಾರೆ. ಆದರೆ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಪದವಿ ಬೇಕು, ಜ್ಞಾನ ಬೇಡ ಎನ್ನುವ ಮನಸ್ಥಿತಿ ಇದೆ. ಯಾರೂ ಕದಿಯಲಾಗದ ಸಂಪತ್ತು ವಿದ್ಯೆ. ಇದರಿಂದ ನಮ್ಮ ಜೀವನ ನಾವೇ ರೂಪಿಸಿಕೊಳ್ಳಬಹುದು ಎಂದರು.

ಪಾಲಕರು ಬಾಲ್ಯದಲ್ಲೇ ಮಗುವಿಗೆ ಸಂಸ್ಕಾರ ಮತ್ತು ಜೀವನದ ಗುರಿ ತಿಳಿಸಿಕೊಡಬೇಕು. ಮಕ್ಕಳು ಉತ್ತಮ ಪರಿಸರದಲ್ಲಿ ಬೆಳೆಯುವಂತೆ ನೊಡಿಕೊಳ್ಳಬೇಕು. ಜ್ಞಾನದ ಸೆಲೆ ಇದ್ದಾಗ ಯಶಸ್ಸು ಹುಡುಕಿ ಬರುತ್ತದೆ. ಸ್ಪರ್ಧಾತ್ಮಕ ಪರೀೆ ಒಂದು ತಪಸ್ಸಾಗಿರಬೇಕು ಎಂದರು.

ವಿದ್ಯಾರ್ಥಿಗಳಿಗೆ ಸೋಮಾರಿತನ, ಆಲಸ್ಯ, ಕೆಟ್ಟ ಸ್ನೇಹಿತರೇ ಶತ್ರುಗಳು. ಅದರಿಂದ ಹೊರಬರಬೇಕು. ಶ್ರಮ, ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ಕಲಿಕೆ ಎನ್ನುವುದು ಒಂದು ದಿನದ ಕಾರ್ಯವಲ್ಲ. ಅದು ನಿರಂತರ. ಎಲ್ಲರಿಗೆ ಎಲ್ಲವೂ ಬೇಕು. ಎಲ್ಲ ವಿಷಯಗಳಲ್ಲಿ ಜ್ಞಾನ ಪಡೆಯಬೇಕು. ಪ್ರೇರಣೆ, ವ್ಯವಧಾನ, ತಾಳ್ಮೆ, ಆಸಕ್ತಿ ಜತೆಗೆ ಜ್ಞಾನದ ಹಸಿವಿರಬೇಕು. ಸ್ವಯಂ ಕನಸನ್ನು ಅದು ಕೈಗೂಡುವವರೆಗೂ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಷ್ಟಪಟ್ಟು ವಿದ್ಯೆ ಕಲಿತರೆ ಸಮಾಜದಲ್ಲಿ ಉತ್ತಮ ಸ್ಥಾನ ಸಿಗುವುದಲ್ಲದೆ ಸುಂದರ ಬದುಕಿಗೆ ಮಾರ್ಗವಾಗುತ್ತದೆ. ಆದ್ದರಿಂದ ವಿದ್ಯಾಭ್ಯಾಸದ ಸಮಯದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಪಠ್ಯದ ಕಡೆಗೆ ಗಮನ ಕೊಡಬೇಕು ಎಂದು ಪ್ರಾಂಶುಪಾಲ ಪೊ.ತಿಮ್ಮಹನುಮಯ್ಯ ಹೇಳಿದರು.

ಬಹುಮಾನ ವಿತರಣೆ : ತ್ಯಾಮಗೊಂಡ್ಲು ಪ್ರಥಮ ದರ್ಜೆ ಕಾಲೇಜಿನಿಂದ ಸ್ಪರ್ಧಾತ್ಮಕ ಪರೀೆ ತೆಗೆದುಕೊಳ್ಳುವ ಎಷ್ಟೇ ವಿದ್ಯಾರ್ಥಿಗಳು ಬಂದರೂ ಅವರಿಗೆ ಉಚಿತ ತರಬೇತಿ ನೀಡುವುದಾಗಿ ಡಾ.ರಾಮಣ್ಣಗೌಡ ೂಷಿಸಿದರು. ಸಾಂಸತಿಕ ಸಮಿತಿ ಸಂಚಾಲಕ ಡಾ.ಕೆ.ದಿವಾಕರ್​ ಕಾಲೇಜಿನ ಬೆಳವಣಿಗೆ ಮತ್ತು ಕಾಲೇಜಿನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ, ಸಾಂಸತಿಕ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸತಿಕ ಚಟುವಟಿಕೆ ನಡೆಸಿಕೊಟ್ಟರು.