ಜಿಲ್ಲೆ

ಐಟಿಐ ಉತ್ತೀರ್ಣರಿಗೆ ಪ್ರಮಾಣ ಪತ್ರ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಐಟಿಐ ಸಂಸ್ಥೆಗಳು ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ವೃತ್ತಿ ಕೋರ್ಸ್ಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡಿ ಸಮಸ್ಯೆ, ಸವಾಲು ಎದುರಿಸಲು ಸಶಕ್ತಗೊಳಿಸಬೇಕು ಎಂದು ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಹೇಳಿದರು.

ಇಲ್ಲಿಯ ರಾಜನಗರದ ಶಾ. ಡಿ.ಜೆ. ಛೇಡಾ ಐಟಿಐ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಖಿಲ ಭಾರತ ವೃತ್ತಿ ಪರೀೆಯಲ್ಲಿ ಉತ್ತೀರ್ಣರಾದ ವಿದ್ಯಾಥಿರ್ಗಳಿಗೆ ಪ್ರಮಾಣ ಪತ್ರ ವಿತರಿಸುವ ರಾಷ್ಟ್ರೀಯ ಕೌಶಲ ಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಸೂಕ್ತ ಉದ್ಯೋಗಾವಕಾಶಗಳ ಮಾಹಿತಿಯನ್ನು ಆಕಾಂಗಳಿಗೆ ನೀಡಬೇಕು. ಸ್ವಂತ ಉದ್ಯಮ ಕೈಗೊಳ್ಳುವವರಿಗೆ ಅವಕಾಶಗಳನ್ನು ನೀಡಬೇಕು ಎಂದರು.

ಘಟಿಕೋತ್ಸವ ಉದ್ಘಾಟಿಸಿದ ಧಾರವಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ರವೀಂದ್ರ ದ್ಯಾಬೇರಿ, ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ಟಿಕೋತ್ಸವ ಈಗ ಐಟಿಐ ಕಾಲೇಜುಗಳಲ್ಲಿ ನಡೆಯುತ್ತಿದೆ. ಇದು ಯುವಜನರ ಕೌಶಲ ಅಭಿವೃದ್ಧಿಗೆ ದಿಕ್ಸೂಚಿ ಎಂದರು.

ಮಹಾವೀರ ಶಿಕ್ಷಣ ಸಂಸ್ಥೆಯ ಕಾರ್ಯದಶಿರ್ ಆರ್.ಟಿ. ಅಣ್ಣಿಗೇರಿ, ಕೋಶಾಧ್ಯಕ್ಷ ಆರ್.ಟಿ. ತವನಪ್ಪನವರ, ಆರ್.ಎ. ಶೆಟ್ಟಿ ಪಿಯು ಕಾಲೇಜಿನ ಗೌರವ ಚೇರ್ಮನ್ ಬಿ.ಟಿ.ರಾಜಮಾನೆ, ಆರ್.ಬಿ. ಸಾಬಣ್ಣವರ, ಲೋಹಿತ ಸರ್ಜನ್, ಆರ್.ಎನ್. ಕೋಟಿ, ಸಿ.ಜಿ. ಪತ್ರಾವಳಿ, ಎಸ್.ಆರ್. ನೀರಾವರಿ, ವಿಜಯಲಕ್ಷ್ಮಿ ಮಂದವಾಡಿ, ಸ್ಪಂದನಾ ಕಂಬಳಿ, ಇತರರು ಪಾಲ್ಗೊಂಡಿದ್ದರು.