ದೇವದುರ್ಗದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಮಾಸಾಚರಣೆ ಕಾರ್ಯಕ್ರಮದಲ್ಲಿ ತಾಯಿ-ಮಗುವಿಗೆ ಆಹಾರ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ರತ್ನಾ, ಶಾಂತಮ್ಮ, ಅನುಸೂಯ, ನಾಗಮಣಿ, ಸುಜಾತ ನಾಯಕ, ರತ್ನಾಬಾಯಿ, ರೇಣುಕಾ, ಶಮಶಾದ್ ಬೇಗಂ ಇದ್ದರು. 
ಜಿಲ್ಲೆ

ಸಿರಿಧಾನ್ಯ ಸೇವನೆಯಿಂದ ರೋಗ ದೂರ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಸಿರಿಧಾನ್ಯ ಆಹಾರ ಸೇವನೆಯಿಂದ ಮಹಿಳೆಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ನಿವಾರಣೆಯಾಗಲಿದೆ ಎಂದು ಅಬ್ಬುಮೊಹಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಮಶಾದ್ ಬೇಗಂ ಹೇಳಿದರು.

ರೋಗ ನಿರೋಧಕ ಶಕ್ತಿ ಹೆಚ್ಚಳ

ಪಟ್ಟಣದ ಪಟೇಲ್ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸಿರಿಧಾನ್ಯ ಆಹಾರ ಸೇವನೆಯಿಂದ ರೋಗ ದೂರ ಮಾಡಬಹುದಾಗಿದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರಾದ ರತ್ನಾ, ಶಾಂತಮ್ಮ, ಅನುಸೂಯ, ನಾಗಮಣಿ, ಸುಜಾತ ನಾಯಕ, ರತ್ನಾಬಾಯಿ, ರೇಣುಕಾ, ಕೌಸರ್ ಬೇಗಂ, ಪದ್ಮಾವತಿ, ಜಯಶ್ರೀ, ಖೈಯರುನಿಸಾ ಬೇಗಂ ಇತರರಿದ್ದರು.