ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ನರೇಗಾ ಯೋಜನೆಯಲ್ಲಿ ನಡೆದಿರುವ ಗಿಡ ನೆಡುವ ಕಾಮಗಾರಿಯನ್ನು ಸಿಇಒ ಮೋನಾ ರೋತ್ ಪರಿಶೀಲನೆ ಮಾಡಿದರು. ನಿಂಗರಾಜು ಇತರರು ಹಾಜರಿದ್ದರು. 
ಜಿಲ್ಲೆ

ನರೇಗಾ ಕಾಮಗಾರಿ ಪರಿಶೀಲಿಸಿದ ಸಿಇಒ

ನಾಗೇಶ ಎಸ್

ಯಳಂದೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನರಿಗೆ ಕೆಲಸ ನೀಡುವುದರ ಜತೆಗೆ ಗುಣಮಟ್ಟದ ಕಾಮಗಾರಿಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಪಂ ಸಿಇಒ ಮೋನಾ ರೋತ್ ಸೂಚಿಸಿದರು.

ಸೋಮವಾರ ತಾಲೂಕಿನ ಗುಂಬಳ್ಳಿ, ದುಗ್ಗಹಟ್ಟಿ ಪಂಚಾಯಿತಿಯ ವ್ಯಾಪ್ತಿಯ ನರೇಗಾ ಯೋಜನೆ ಕಾಮಗಾರಿಗಳ ಪರಿಶೀಲನೆ ಮಾಡಿ ಮಾತನಾಡಿದ ಅವರು, ಸರ್ಕಾರವು ಯೋಜನೆಯನ್ನು ಬಡವರ್ಗದ ಕೂಲಿಕಾರ್ಮಿಕರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಮಾಡುವ ಜತೆಗೆ ಸ್ಥಳೀಯ ಮಟ್ಟದಲ್ಲಿ ಕೂಲಿ ಸಿಗುವ ಮೂಲಕ ಆರ್ಥಿಕವಾಗಿ ನೆರವಾಗುವುದರ ಜತೆಗೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಗ್ರಾಮದಲ್ಲಿನ ಸಿಸಿ ರಸ್ತೆ, ಚರಂಡಿ, ಗಿಡ ನೆಡುವ ಕಾಮಗಾರಿ (ನೆಡು ತೋಪು) ಕೊಟ್ಟಿಗೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಬಸವಣ್ಣ, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ನಿಂಗರಾಜು, ಸಿಬ್ಬಂದಿ ನಾಗರಾಜು, ಕೃಷ್ಣಾ, ನರೇಗಾ ಯೋಜನೆ ಜೆಇ ರಾಜೇಶ್, ಸಮಂತಾ ಇತರರು ಹಾಜರಿದ್ದರು.