ಜಿಲ್ಲೆ

ಚೆನ್ನಮ್ಮ ಕಿರು ಮೃಗಾಲಯದಲ್ಲಿ ಅಕ್ಕ ಕೆಫೆ ಆರಂಭ

ಮಂಜುನಾಥ ಕೋಳಿಗುಡ್ಡ

- ಸಿಇಒ ರಾಹುಲ ಶಿಂಧೆ ಸೂಚನೆ

ಬೆಳಗಾವಿ: ಇಲ್ಲಿನ ಭೂತರಾಮಹಟ್ಟಿಯ ಕಿತ್ತೂರ ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಪ್ರವಾಸಿಗರ ಅನುಕೂಲಕ್ಕಾಗಿ ಹಾಗೂ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಸ್ವ-ಉದ್ಯೋಗಾವಕಾಶ ಕಲ್ಪಿಸಲು ಅಕ್ಕ ಕೆಫೆ ಆರಂಭಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ ಶಿಂಧೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಭೂತರಾಮಹಟ್ಟಿಯ ಕಿತ್ತೂರ ರಾಣಿ ಚೆನ್ನಮ್ಮ ಕಿರು ಮೃಗಾಲಯ ಅಭಿವೃದ್ಧಿ ಕುರಿತು ಅಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೃಗಾಲಯಕ್ಕೆ ಮಕ್ಕಳು ಸಮೇತ ಕುಟುಂಬ ಸದಸ್ಯರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅವರೆಲ್ಲರೂ ಅಕ್ಕ ಕೆಪೆ ಮಾದರಿಯಲ್ಲಿ ಹೋಟೆಲ್ ಆರಂಭಿಸುವಂತೆ ಜನರು ಒತ್ತಾಯಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಈಗಾಗಲೇ ಜಿಪಂ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕ ಕೆಪೆಗೆ ಜನರ ಸ್ಪಂದನೆ ಸಿಕ್ಕಿದ್ದು, ಎಲ್ಲ ಕಡೆಯಿಂದ ಸಕಾರಾತ್ಮಕವಾಗಿ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇದೇ ಮಾದರಿಯಲ್ಲಿಯೇ ಕಿರು ಮೃಗಾಲಯದಲ್ಲಿ ಕೆಪೆ ಆರಂಭಿಸಬೇಕು. ಇದರಿಂದ ರಾಷ್ತ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನೋಂದಣಿಯಾಗಿರುವ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡಿದಂತಾಗಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ವಿಭಾಗ ಮಾರಿಯಾ ಕ್ರಿಸ್ಟು ರಾಜಾ,ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ವಲಯ ಅರಣ್ಯಾಧಿಕಾರಿಗಳು ಕಿತ್ತೂರ ರಾಣಿ ಚೆನ್ನಮ್ಮ ಮೃಗಾಲಯ ಪವನ್ ಕುರನಿಂಗ್ ಇತರರಿದ್ದರು.